ನವರಾತ್ರಿಯ ಮೂರನೇಯ ದಿನ ಬೂದು ಬಣ್ಣದ ಬಟ್ಟೆ ಧರಿಸಿದ ಸ್ನೇಹಿತರು. ವಿದೇಶದಲ್ಲೂ ಹೆಚ್ಚಿದ ಕಲರ್ಸ್ ಕಲರವ

ಬೈಲಹೊಂಗಲ :  ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಸನ್ 2005 ರ ಸಾಲಿನ  ಬಿಕಾಂ  ವಿದ್ಯಾರ್ಥಿಗಳು ಪ್ರತಿಯೊಂದು ಹಬ್ಬಗಳನ್ನು ಒಟ್ಟಾಗಿ ಆಚರಿಸುವ, ಶುಭಾಶಯಗಳುನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ದೇಶ- ವಿದೇಶಗಳಲ್ಲಿ ಭಾರತೀಯ ಸನಾತನ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 

promotions

ಇದರಲ್ಲಿ ಕೆಲ ಸ್ನೇಹಿತರು ಜಪಾನ, ಆಸ್ಟ್ರೇಲಿಯಾ ನೆರೆಯ ರಾಜ್ಯ ಗೋವಾ, ಮಹಾರಾಷ್ಟ್ರ ಹಾಗೂ  ರಾಜ್ಯದ ರಾಜಧಾನಿ ಬೆಂಗಳೂರನಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರೂ ಸಹ ದೇಶಿಯ ಹಬ್ಬಗಳನ್ನು ಅಷ್ಟೇ ಅಚ್ಚುಕಟ್ಟಾಗಿ ಆಚರಿಸುತ್ತಾರೆ. 

promotions

ನವರಾತ್ರಿಯ ದಿನಗಳಂದು ಒಂಬತ್ತು ಬಗೆಯ ಬಣ್ಣದ ಉಡುಗೆ ಧರಿಸಿ, ಬೇರೆ ಬೇರೆ ಪ್ರದೇಶಗಳಲ್ಲಿ ಇದ್ದರೂ ಸಹ ಸ್ನೇಹಿತರೆಲ್ಲರೂ ಸಂವಹನ ಮಾಧ್ಯಮ ವಾಟ್ಸಾಪ್ ವಿಡಿಯೋ ಕಾಲ ಮುಖಾಂತರ ಒಟ್ಟಾಗಿ ನಾಡಹಬ್ಬ ದಸರಾ ಆಚರಣೆಗೆ ಮುಂದಾಗಿದ್ದಾರೆ. 

ಜಪಾನ ದೇಶದಲ್ಲಿರುವ ಕವಿತಾ, ಆಸ್ಟ್ರೇಲಿಯಾ ದಲ್ಲಿರುವ ಅನುರಾಧಾ ಪರದೇಶದಲ್ಲಿದ್ದರೂ ನಮ್ಮ ದೇಶಿಯ  ಹಬ್ಬಗಳನ್ನು ಆಚರಿಸುವದು ಖುಷಿ ನೀಡುತ್ತದೆ ಎಂದು ಉಳಿದ ಸ್ನೇಹಿತರೊಂದಿಗೆ ತಮ್ಮ ವಿದೇಶಿ ಅನಿಸಿಕೆಯನ್ನು  ಹಂಚಿಕೊಂಡಿದ್ದಾರೆ. 

ಸ್ನೇಹಿತರ ಬಳಗದಲ್ಲಿ ಸುನೀಲ ಮರಕುಂಬಿ, ಬಸವರಾಜ ಕಾತರಕಿ, ಪವಿತ್ರಾ, ಸುವರ್ಣ, ರವಿ ಮೊದಲಾದವರು ಸೇರಿದ್ದಾರೆ. ಸುಮಾರು 15 ಕ್ಕೂ ಹೆಚ್ಚು ಸ್ನೇಹಿತ ಬಳಗದ ವಾಟ್ಸಾಪ್ ಗ್ರುಪ್ ಹೊಂದಿದ್ದಾರೆ.

ವರದಿ : ರವಿಕಿರಣ್  ಯಾತಗೇರಿ

Read More Articles