ಮಹಿಳೆಯರ ಕುಟುಂಬ ನಿರ್ವಹಣೆಗೆ ಗ್ಯಾರೆಂಟಿ ಯೋಜನೆಗಳು ಸಹಾಯವಾಗಿವೆ: ಡಿಕೆಶಿ

ಹಾಸನ: ಇಂದಿನ ದಿನಗಳಲ್ಲಿ ಬೆಲೆಗಳು ಗಗನಕ್ಕೇರುತಿವೆ ಮತ್ತು ಆದಾಯ ಪಾತಾಳ ಮುಟ್ಟಿರುವ ಇವತ್ತಿನ ದಿನಗಳಲ್ಲಿ ಮಹಿಳೆಯರಿಗೆ ಕುಟುಂಬ ನಿರ್ವಹಣೆಗೆ ನೆರವಾಗಲೆಂದು ತಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಅವುಗಳನ್ನು ಜಾರಿಗೆ ತಂದಿದೆ ಎಂದು ಡಿಕೆಶಿ ಹೇಳಿದ್ದಾರೆ, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಅರಕಲಗೂಡುನಲ್ಲಿ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಿಎಸ್ ಯಡಿಯೂರಪ್ಪ ಮತ್ತು ವಿರೋಧ ಪಕ್ಷದ ನಾಯಕ ಆರ್ ಅಶೋಕ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ ಶಿವಕುಮಾರ್, ಅವರು ಕನಸು ಕಾಣುತ್ತಿದ್ದಾರೆ ಅ ಕನಸು ಯಾವತ್ತೂ ನನಸಾಗಲ್ಲ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಈಗ ಉಳಿದಿರುವ 4 ವರ್ಷಗಳ ಅವಧಿಯನ್ನು ಯಶ್ವಸ್ವೀಯಾಗಿ ಪೂರ್ತಿಗೊಳಿಸುವುದಲ್ಲದೆ ಮುಂದಿನ 5-ವರ್ಷಗಳ ಅವಧಿಗೂ ಆಡಳಿತ ನಡೆಸಲಿದೆ ಎಂದು ಹೇಳಿದರು.

promotions

promotions

Read More Articles