
ಪಾಕೃತಿಕ ಸೌಂದರ್ಯಕೆ ಸಾಕ್ಷಿ ಗುಲ್ ಮೊಹರ್
- shivaraj bandigi
- 29 May 2024 , 4:14 PM
- Belagavi
- 1000
ಬೈಲಹೊಂಗಲ : ಪ್ರಕೃತಿಯ ವಿಸ್ಮಯಕ್ಕೆ ಸಾಕ್ಷಿ ಈ ಗುಲ್ ಮಹರ್ ಮರಗಳು. ಮಳೆಗಾಲದ ಆರಂಭಕ್ಕೂ ಮುನ್ನ ತಮ್ಮ ವಿಶೇಷ ಅವತಾರಗಳಿಂದ ಹಸಿರು ಮರಗಳ ಮದ್ಯೆ ಕೆಂಪು ಬಣ್ಣದ ಹೂವುಗಳಿಂದ ರಸ್ತೆಯಲ್ಲಿ ಬೆಳೆದು ನೋಡುಗರ ಕಣ್ಮನ ಸೆಳೆಯುತ್ತವೆ.

ಪಟ್ಟಣದ ಹೊರವಲಯದಲ್ಲಿ ಈ ತರಹದ ಗುಲ್ ಮೊಹರ ಹೂವಿನ ಮರಗಳು ಬೆಳೆದು ಮಳೆಗಾಲದ ಸೊಬಗನ್ನು ನೋಡುಗರ ಕಣ್ಣಿಗೆ ನೀಡುತ್ತಿವೆ.

ಅಂದವಾದ ರಸ್ತೆಯಲ್ಲಿ ಹಸಿರು ಮರಗಳ ನಡುವೆ ಕೆಂಪು ಬಣ್ಣದ ಸೆರಗನ್ನು ಮೈಮೇಲೆ ಹಾಕಿಕೊಂಡಂತೆ ಕಾಣುವ ಈ ಮರಗಳು ವರ್ಷಕ್ಕೊಮ್ಮೆ ಬೆಳೆದು ನಿಂತರೂ ರಸ್ತೆಯಲ್ಲಿ ಹೋಗೂವ ಪ್ರತಿಯೊಬ್ಬನ ಮನಸ್ಸನ್ನು ಮುದಗೊಳಿಸುತ್ತವೆ. ಈ ಮರಗಳ ಮದ್ಯೆ ರಸ್ತೆಯಲ್ಲಿ ಹೋಗೂವಾಗ ಏನೋ ಆನಂದ. ಪ್ರಕೃತಿಯ ಮಡಿಲು ಎಷ್ಟೊಂದು ಚಂದ ಎನ್ನುವ ಭಾವನೆ ವ್ಯಕ್ತವಾಗುವದಂತು ನಿಜ.
ವರದಿ : ರವಿಕಿರಣ್ ಯಾತಗೇರಿ