ಯುಗಾದಿ ಹಬ್ಬದ ಶುಭ ನುಡಿಗಳು ಹರೀಶ್ ಬಡಿಗೇರ್ ಅವರಿಂದ.
- Prasad Kambar
 - 15 Jan 2024 , 3:34 AM
 - Belagavi
 - 489
 
*ಯುಗಾದಿ*
ಯುಗಾದಿ ಬರುತಿದೆ ಯುಗಾದಿ
ಒಣ ಎಲೆ ಉದುರಿಸುತ್ತಾ
ಹೊಸ ಎಲೆ ಚಿಗುರಿಸುತ್ತಾ
ಜೀವ ಸಂಕುಲಕ್ಕೆ ಹೊಸಸ್ಪರ್ಶ ನೀಡುತ್ತಾ ಬರುತ್ತಿದೆ ಯುಗಾದಿ ಬರುತ್ತಿದೆ

ಮನದ ಕಹಿ ಯನ್ನ ಮರೆಸುತ್ತಾ
ಕಾಣದ ಸಿಹಿಯನ್ನು ಉಣ ಬಡಿಸುತ್ತಾ  ಬರುತ್ತಿದೆ ಯುಗಾದಿ ಬರುತ್ತಿದೆ

ಬೇವು ಬೆಲ್ಲವ  ಬೀರಿ 
ನಗುವ ಸಂತೋಷದ ತೇರ  ಏರಿ
ಬರುತ್ತಿದೆ ಯುಗಾದಿ ಬರಿತ್ತಿದೆ.
ಜೀವ ಸಂಕುಲಕ್ಕೆ  ನವ ಉದಯ  ಉದಯಿಸಲು ರವಿಯನ್ನೇ
ನೇಮಿಸಲು 
ಬರುತ್ತಿದೆ ಯುಗಾದಿ ಬರುತ್ತಿದೆ
  *ರಚನೆ : ಹೆಚ್ಚ. ಪಿ. ಬಡಿಗೇರ*
          ಕುಟಕನಕೇರಿ. ಬಾದಾಮಿ
