ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಆರೋಗ್ಯ ವಿಚಾರಿಸಿದ್ದೇನೆ : ಆರ್‌.ಅಶೋಕ

ಬೆಳಗಾವಿ :

promotions

ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೇನೆ. ಮಂಗಳೂರು ಉಡುಪಿ ಭಾಗದಲ್ಲಿ ಗಡಿಪಾರು ಮಾಡೋದು ಕಾಂಗ್ರೆಸ್ ಕೆಲಸವಾಗಿದೆ. ಬಿಜೆಪಿ ರಾಜ್ಯಾದ್ಯಕ್ಷರ ಜೊತೆ ಮಾತನಾಡುತ್ತೇನೆ. ಹೊಡಿಯಲಿಕ್ಕೆ ಅವರಿಗೆ ಅಧಿಕಾರ ಕೊಟ್ಟವರಾರು ಎಂದು ವಿಪಕ್ಷ ನಾಯಕ ಆರ್. ಅಶೋಕ ವಾಗ್ದಾಳಿ ನಡೆಸಿದರು.

promotions

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿ ಮುಖಂಡನ ಮೇಲೆ ಹಲ್ಲೆ ಮಾಡಿರುವುದು ನ್ಯಾಯಾಲಯ ತಿರ್ಮಾನ ಮಾಡುತ್ತದೆ. ಕಾನೂನನ್ನ ಕೈಗೆ ತೆಗೆದುಕ್ಕೊಳ್ಳೊರು ಇವರು ಯಾರು ಎಂದು ಪ್ರಶ್ನಿದ ಅವರು, ಇದರಲ್ಲಿ ಕಾಂಗ್ರೆಸ್ ಕೈವಾಡ ಇದೆ, ಎನೂ ಇಲ್ಲದೆ ಮೆಲೆ ಆಪಾದನೆ ಯಾಕೆ ಮಾಡುತ್ತಾರೆ ಎಂದರು.

ರಾಜ್ಯದಲ್ಲಿ ಬರ ವಿಚಾರದ ಪ್ರಶ್ಬೆಗೆ ಉತ್ತರಿಸಿದ ಅವರು, 13 ತಾಲೂಕು ಬಿಟ್ಟರೆ ರಾಜ್ಯದಲ್ಲಿ ಬರ ಇದೆ.ಸರಕಾರಕ್ಕೆ ತಾಯಿ‌ ಹೃದಯ ಇರಬೇಕು. ಇವರಿಗೆ ಕಟುಕನ ಹೃದಯ ಇದೆ.ಇವರು ಬರ ನಿರ್ವಹಣೆ ಮಾಡೋದು ಬಿಟ್ಟು ತೆಲಂಗಾಣ ದಲ್ಲಿ ರಾಜಕೀಯ ಮಾಡೋಕ್ಕೆ ಹೋಗುತ್ತಾರೆ.ಕಾನೂನು ಉಲ್ಲಂಘನೆ ಮಾಡುತ್ತೆ ಕಾಂಗ್ರೆಸ್ ಸರಕಾರ. ಇದು ಜನ ವಿರೋಧಿ ಸರಕಾರ ಎಂದು ಹರಿಹಾಯ್ದರು.

ಸಿದ್ದರಾಮಯ್ಯ ಗೆ ಟಿಪ್ಪು ಅಂದರೆ ಬಾಳ ಪ್ರೀತಿ. ಸಿದ್ದರಾಮಯ್ಯ ಅವರು ಮುಸ್ಲಿಂ ಸಮುದಾಯವನ್ನ‌ ಓಲೈಕೆ ಮಾಡೋದು ಸರಿಯಲ್ಲ. ಹಿಂದೂಗಳನ್ನ ಎರಡನೇ ದರ್ಜೆ ತರಾ ನೋಡುತ್ತಿದ್ದಾರೆ. ಟಿಪ್ಪು ಜಯಂತಿ, ಶಾಧಿ ಭಾಗ್ಯ ,ಇವೆಲ್ಲ ಕೈ ಬಿಡಬೇಕು ಮುಸ್ಲಿಂ ಅವರ ಮತಕ್ಕಾಗಿ ಈ ರೀತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Read More Articles