ಪಕೃತಿ ಹಾಳು ಮಾಡಿದರೆ ದುರಂತ ತಪ್ಪಿದ್ದಲ್ಲ ! ಜಾಲಿಕೊಪ್ಪ ತಪೋಭೂಮಿಯ ಶಿವಾನಂದ ಗೂರೂಜಿ
- shivaraj B
- 5 Aug 2024 , 4:24 PM
- Bailhongal
- 244
ಬೈಲಹೊಂಗಲ : ನಿಸರ್ಗ ಜೀವಿಗಳು ಬದುಪಕೃತಿ ಹಾಳು ಮಾಡಿದರೆ ದುರಂತ ತಪ್ಪಿದ್ದಲ್ಲಕಲು ಭೂಮಿ, ಉಸಿರಾಟಕ್ಕೆ ಗಾಳಿ, ಕುಡಿಯಲಿಕ್ಕೆ ಜಲ ಬೆಚ್ಚಗಿರಲು ಅಗ್ನಿ, ಬೆಳಕು ಸೇರಿದಂತೆ ಸರ್ವಸ್ವ ನೀಡಿದ ನಿಸರ್ಗಕ್ಕೆ ವಿಚಾರವಂತರಾಗಿರುವ ಮಾನವರಾದ ನಾವು ಕೃತಜ್ಞತೆ ಸಲ್ಲಿಸಬೇಕು. ಪಕೃತಿ ಹಾಳು ಮಾಡಿದರೆ ದುರಂತ ತಪ್ಪಿದ್ದಲ್ಲ ಎಂದು ಜಾಲಿಕೊಪ್ಪ ತಪೋಭೂಮಿಯ ಪೂಜ್ಯ ಶಿವಾನಂದ ಗೂರೂಜಿ ಹೇಳಿದರು.
ಸಮೀಪದ ನಯಾನಗರ ಸೇತುವೆಯಲ್ಲಿ ಮಲಪ್ರಭಾ ನದಿಗೆ ಬಾಗಿನ ಅರ್ಪಿಸಿ ನಡೆದ ಸಭೆಯ ಸಾನಿಧ್ಯವಹಿಸಿ ಆರ್ಶಿವಾದ ನೀಡಿದ ಅವರು, ಮನುಷ್ಯನ ಜೀವನಕ್ಕೆ ಬೇಕಾದ ಅನ್ನ, ನೀರು, ಗಾಳಿ, ವಸತಿ ಎಲ್ಲವನ್ನು ಅನುಭವಿಸಿ ಮಾನವ ತನ್ನ ದುರಾಸೆಗೆ ಅನ್ನ ನೀಡುವ ಭೂಮಿಗೆ ವಿಷ ಹಾಕಿ ತನ್ನ ಆರೋಗ್ಯವನ್ನು ತಾನೆ ಹಾಳು ಮಾಡಿಕೊಳ್ಳುತಿದ್ದಾನೆ. ಕುಡಿಯವ ನೀರು, ಕೃಷಿ ಭೂಮಿಯ ನೀರಾವರಿಗಾಗಿ ತಾಯಿ ಮಲಪ್ರಭೆಯನ್ನ ಕೋಟ್ಯಾಂತರ ಜನ ಅವಲಂಬಿಸಿದ್ದಾರೆ. ಅವರೆಲ್ಲರೂ ಮಲಪ್ರಭಾ ನದಿ ಮೈದುಂಬಿಕೊಂಡಾಗಲು ಜನ ಮೈಮೆರೆಯುವದು ದುರದೃಷ್ಟಕರ. ಪ್ರಕೃತಿಗೆ ಸದಾ ಕೃತಜ್ಞತಾ ಭಾವದಿಂದ ಇರಬೇಕೆಂದರು. ಎಫ್.ಎಸ್.ಸಿದ್ದನಗೌಡರ ಮಾತನಾಡಿ, 1974ರಲ್ಲಿ ನಿರ್ಮಾಣವಾದ ರೇಣುಕಾ ಸಾಗರ ಜಲಾಶೆ ಕೇವಲ ಹತ್ತು ಬಾರಿ ತುಂಬಿದೆ. ಈ ವರ್ಷ ಜಲಾಶಯ ತುಂಬಿರುವದರಿಂದ ನದಿ ಪಾತ್ರದ ಹಾಗೂ ಹುಬ್ಬಳ್ಳಿ-ಧಾರವಾಡ, ಗದಗ ಹಾಗೂ ಬಾಗಲಕೋಟ ಜಿಲ್ಲೆಯ ಜನತೆಗೆ ಕುಡಿಯುವ ನೀರಿಗೆ ನಿಟ್ಟುಸಿರು ಬಿಟ್ಟಂತಾಗಿದೆ. ಬರುವ ದಿನಗಳಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಮಲಪ್ರಭಾ ನದಿ ದಡದಲ್ಲಿರುವ ಹಳ್ಳಿಗಳ ಜಮೀನುಗಳಿಗೆ ನೀರಾವರಿ ಯೋಜನೆ ಅನುಷ್ಠಾನಗೊಳಿಸಬೇಕು. ಅಚುಕಟ್ಟು ಪ್ರದೇಶದಲ್ಲಿರುವ ಏತ ನೀರಾವರಿ ಪಂಪಸೆಟ್ ಗಳು ಸಂಪೂರ್ಣ ಹಾಳಾಗಿದ್ದು ಅವುಗಳ ದುರಸ್ತಿ ಕಾರ್ಯ ನಡೆಸಿ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು. ನದಿಯಲ್ಲಿರುವ ಹೊಳು ಎತ್ತುವ ಕಾರ್ಯ ಕೈಗೆತ್ತಿಗೊಳ್ಳಬೇಕು. ನದಿ ಪಾತ್ರದ ಸ್ಥಾಳಾಂತರ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕು. ನೂರಾರು ರೈತರು ಕುಟುಂಬ ಸಮೇತ ಆಗಮಿಸಿ ಮಲಪ್ರಭೆಗೆ ಬಾಗಿನ ಅರ್ಪಿಸಿದ್ದು ರೈತರ ಕರ್ತವ್ಯವನ್ನು ಎಚ್ಚರಿಸಿದೆ ಎಂದರು.
ರೈತ ಮುಖಂಡ ಮಹಾಂತೇಶ ಕಮತ ಮತ್ತು ಧರ್ಮ ರಾಜ ಗೌಡಾ ಮಾತನಾಡಿ, ಮಲಪ್ರಭಾ ಯೋಜನೆಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಅಸಡ್ಡೆ ತೋರುತ್ತಿರುವದು ಸರಿಯಲ್ಲ. ನದಿ ಪಾತ್ರದ ಹಾಳಬಿದ್ದ ಜಾಕವೆಲ್ ಕೆಟ್ಟುಹೊದ ಕಾಲುವೆ ಮತ್ತು ರಸ್ತೆಗಳ ರೀಪೇರಿ ಕಾರ್ಯ ನಡೆದಿಲ್ಲ ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಇಲ್ಲದಿದ್ದರೆ ಬರುವ ದಿನಗಳಲ್ಲಿ ನೀರಾವರಿ ಕಛೇರಿಗೆ ಬಿಗ ಜಡಿಯಬೇಕಾಗುತ್ತದೆ ಎಂದರು. ಜಾಲಿಕೊಪ್ಪ ತಪೋಭೂಮಿ ಆಶ್ರಮದಿಂದ ಭಜನೆ, ಆರತಿ ಎತ್ತಿದ ರೈತ ಮಹಿಳೆಯರು ರೈತ ಸಂಘಟನೆಯ ನೂರಾರು ನಾಯಕರು ವಿಜೃಂಭಣೆಯಿಂದ ನಡೆದುಕೊಂಡು ಸಾಗಿ ನದಿ ದಡದಲ್ಲಿ ಬಾಗಿನ ಅರ್ಪಿಸಿದರು.
ರೈತದಂಪತಿಗಳಾದ ರೇಣುಕಾ ಹೋಳಿ,ಸುರೇಶ ಹೊಳಿ ಬಾಗಿನ ಅರ್ಪಣೆಯ ಕಂಕೈರ್ಯಗಳನ್ನು ನೆರವೆರಿಸಿದರು.
ಬೀರಪ್ಪ ದೇಶನೂರ, ಬಸನಗೌಡ ಪಾಟೀಲ, ಬಸವರಾಜ ಮೊಕಾಶಿ, ಚನ್ನಪ್ಪ ಗಣಾಚಾರಿ,ಮಲ್ಲಿಕಾರ್ಜುನ ಇಂಗಳಗಿ, ಘೂಳಪ್ಪ ಹೊಳಿ, ನಿರ್ಮಲಾ ಹಿರೆಮಠ, ಸಾವಿತ್ರಿ ಕರ್ಪೂರಮಠ, ಬಸಲಿಂಗವ್ವ ಕರಡಿಗುದ್ದಿ, ಸುಮಿತ್ರಾ ಹೋಳಿ,
ಮಹಾದೇವ ಕಲಭಾಂವಿ, ಮಹಾಂತೇಶ ಗೌರಿ, ನಾಗೇಶ ಚೌಗಲೆ, ಅಶೋಕ ಕಳಸಣ್ಣವರ, ಶಿವಕುಮಾರ ಸೋಗಲ, ಮಲ್ಲಿಕಾರ್ಜುನ ಬೋಳೆತ್ತಿನ,
ಧರ್ಮರಾಜ ಗೌಡಾ. ರಾಜನಗೌಡ ಪಾಟೀಲ, ಮಲ್ಲಿಕಾರ್ಜುನ ಹುಂಬಿ, ಶಂಕರ ಕುದರಿ,ಮಲ್ಲಿಕಾರ್ಜುನ ಲಗಾಡಿ, ಬಸವರಾಜ ಬೆಳವಡಿ, ನಾಗರಾಜ ಬುಡಶೆಟ್ಟಿ, ಮಲ್ಲಿಕಾರ್ಜುನ ಕಡೊಲಿ, ಮುನೀರ ಶೇಖ, ಬಸವರಾಜ ದುಗ್ಗಾಣಿ, ದೀಲಾವಾರ ದುಪದಾಳ, ಶ್ರೀಪತಿ ಪಠಾಣಿ, ಸುರೇಶ ಸಂಪಗಾಂವಿ, ಪಡೆಪ್ಪ ಬೊಗೂರ, ಪರಪ್ಪ ಬೊಳಶೆಟ್ಟಿ, ಮಲ್ಲಿಕಾರ್ಜುನ ಅಂಗಡಿ, ಸಂಜು ಬೋಳೆಶೆಟ್ಟಿ, ಮಂಜುನಾಥ ಬೋಳಶೆಟ್ಟಿ,
ರಾಜು ಬೋಳಶೆಟ್ಟಿ, ಮಲ್ಲಿಕಾರ್ಜುನ ಕರಡಿಗುದ್ದಿ, ಸಿದ್ಧಲಿಂಗ ಬೋಳಶೆಟ್ಟಿ, ಅರ್ಜುನ ಕೊಡ್ಲಿ, ಬಾಬೂರಾವ ಬೋಳಶೆಟ್ಟಿ, ರಂಗಪ್ಪ ಬೂದಿಹಾಳ,