ಅಂತರ್‌ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಬೆಳಗಾವಿಯ ಈ ಸ್ಥಳಗಳಲ್ಲಿ ವಾಹನ ಸಂಚಾರ ನಿಷೇಧ

ಬೆಳಗಾವಿ:ಅಂತರ್‌ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ, ಬೆಳಗಾವಿ ಕಮೀಷನರೇಟ್ ವ್ಯಾಪ್ತಿಯ ಕರಡಿಗುದ್ದಿ ಗ್ರಾಮದಿಂದ ಹಿರೇಬಾಗೇವಾಡಿ ಗ್ರಾಮವರೆಗೆ 53 ಕಿಮೀ ‘ಮಾನವ ಸರಪಳಿ’ ನಿರ್ಮಾಣ ಕಾರ್ಯಕ್ರಮವನ್ನು ಜಿಲ್ಲಾಡಳಿತದಿಂದ ಆಯೋಜಿಸಲಾಗುತ್ತಿದೆ. 

Your Image Ad

ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ, 15 ಸೆಪ್ಟೆಂಬರ್ 2024 ರಂದು ಬೆಳಿಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ ಬೆಳಗಾವಿ ನಗರ ವ್ಯಾಪ್ತಿ, ಮಾರಿಹಾಳ ಮತ್ತು ಹಿರೇಬಾಗೇವಾಡಿ ಪೊಲೀಸ್ ಠಾಣೆಗಳ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

Your Image Ad

ನಿಷೇಧಿತ ಮಾರ್ಗಗಳು ಮತ್ತು ಪರ್ಯಾಯ ಮಾರ್ಗಗಳ ವಿವರ:

Your Image Ad

1.ಕರಡಿಗುದ್ದಿ ಗ್ರಾಮದಿಂದ ಮಾರುತಿ ನಗರ ಮಾರ್ಗ: ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಪರ್ಯಾಯವಾಗಿ ಗೋಕಾಕ, ನೇಸರಗಿ, ಯರಗಟ್ಟಿ, ರಾಮದುರ್ಗ ಮತ್ತಿತರ ಕಡೆಗಳಿಗೆ ತೆರಳುವ ವಾಹನಗಳು ಕನಕದಾಸ ಸರ್ಕಲ್ ಮತ್ತು ಕನಬರ್ಗಿ ಅಂಡರ್‌ಬ್ರಿಡ್ಜ್ ಮೂಲಕ ಸಂಚರಿಸಬಹುದು.

Your Image Ad

2.ಹಿರೇಬಾಗೇವಾಡಿ ಬಸವ ಸರ್ಕಲ್ ಮಾರ್ಗ: ಬೈಲಹೊಂಗಲ ಕಡೆಯಿಂದ ಹಿರೇಬಾಗೇವಾಡಿ ಕಡೆಗೆ ಬರುವ ವಾಹನಗಳ ಸಂಚಾರವನ್ನು ನಿಷೇಧಿಸಿದ್ದು, ವಾಹನಗಳು ಬೈಲಹೊಂಗಲ ಮೂಲಕ ಪರ್ಯಾಯ ಮಾರ್ಗವನ್ನು ಅನುಸರಿಸಬಹುದು.

Read More Articles