
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ, 30 ಲಕ್ಷ ವಂಚನೆ
ಬೆಂಗಳೂರು:ಷೇರುಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭಗಳಿಸಬಹುದು ಎಂದು ವ್ಯಕ್ತಿಯೊಬ್ಬರಿಗೆ 30 ಲಕ್ಷ ವಂಚನೆ ಮಾಡಲಾಗಿದೆ.ಬಿಕಾಸಿಪುರ ನಿವಾಸಿ ಮಜರುಲ್ ಹಕ್ ಖಾನ್ ಅವರ ದೂರಿನ ಮೇರೆಗೆ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

'ನವೆಂಬರ್ 20ರಂದು ಅಪರಿಚಿತ ವ್ಯಕ್ತಿ ಮಜುರುಲ್ ಹಕ್ ಖಾನ್ ಅವರ ವಾಟ್ಸ್ಪ್‌ಗೆ ಕರೆ ಮಾಡಿ, ಟ್ರೇಡಿಂಗ್ ವ್ಯವಹಾರದ ಬಗ್ಗೆ ಮಾಹಿತಿ ನೀಡಿ, ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ಹೇಳಿದ್ದಾನೆ. ಈತನ ಮಾತು ನಂಬಿ, ಟ್ರೇಡಿಂಗ್ ವ್ಯವಹಾರದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.
ಹೇಗೆ ವಂಚನೆ

ಎಸಿಐ ವೆಲ್ತ್ ಕಮ್ಯೂನಿಟಿ ಎ-604' ಎಂಬ ವಾಟ್ಸ್ಪ್ ಗ್ರೂಪ್‌ಗೆ ಮಜುರಲ್ ಅವರನ್ನು ಸೇರಿಸಿ ಬಳಿಕ ವೆಬ್ ಲಿಂಕ್ ನೀಡಿ, ಟ್ರೇಡಿಂಗ್ ಮಾಡುವಂತೆ ಸೂಚಿಸಿದ್ದಾನೆ. ಹೂಡಿಕೆ ಹೆಸರಿನಲ್ಲಿ ಅಪರಿಚಿತ ವ್ಯಕ್ತಿ ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಮಜರುಲ್ ವಿವಿಧ ಹಂತಗಳಲ್ಲಿ ಒಟ್ಟು 30.70 ಲಕ್ಷ ವರ್ಗಾಯಿಸಿದ್ದಾರೆ'. ಕೆಲ ದಿನಗಳ ಬಳಿಕ ಅಪರಿಚಿತ ವ್ಯಕ್ತಿ ಹಣ ಅಥವಾ ಲಾಭ ಯಾವುದನ್ನೂ ವಾಪಸ್ ಮಾಡಿಲ್ಲ. ಮಜರುಲ್ ಹಕ್ ಕರೆ ಮಾಡಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಮೋಸ ಮಾಡಿರುವುದು ಗೊತ್ತಾಗಿ, ಠಾಣೆಗೆ ದೂರು ನೀಡಿದ್ದಾರೆ.
ಮಹಿಳೆಗೆ 10 ಲಕ್ಷ ವಂಚನೆ:ಬೆoಗಳೂರು: ಪಾರ್ಟ್ ಟೈಮ್ ಕೆಲಸ ಹುಡುಕುತ್ತಿದ್ದ ಮಹಿಳೆಗೆ ಅಪರಿಚಿತ ವ್ಯಕ್ತಿ ಆನ್‌ಲೈನ್ ಟಾಸ್ಕ್ ಹೆಸರಿನಲ್ಲಿ ಅಧಿಕ ಲಾಭದ ಆಸೆ ತೋರಿಸಿ 10.77 ಲಕ್ಷ ವಂಚನೆ ಮಾಡಲಾಗಿದೆ.ಮಲ್ಲೇಶ್ವರ ನಿವಾಸಿ ಎ.ಎಂ.ಸುನಿತಾ ಅವರ ದೂರಿನ ಮೇರೆಗೆ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕೆಲಸ ಹುಡುಕುತ್ತಿದ್ದ ಸುನಿತಾ ಅವರನ್ನು ವಾಟ್ಸ್ ಅಪ್ ಮೂಲಕ ಸಂಪರ್ಕಿಸಿದ ಅಪರಿಚಿತ ವ್ಯಕ್ತಿ, ಆನ್‌ಲೈನ್ ಟಾಸ್ಕ್ಗಳನ್ನು ಮುಗಿಸಿದರೆ ಹೆಚ್ಚಿನ ಹಣ ಗಳಿಸಬಹುದು ಎಂದು ಆಮಿಷವೊಡ್ಡಿದ್ದಾನೆ. ಬಳಿಕ ಸುನಿತಾ ಅವರನ್ನು ಟೆಲಿಗ್ರಾಂ ಗ್ರೂಪ್‌ವೊಂದಕ್ಕೆ ಸೇರಿಸಿದ್ದಾನೆ. ವಂಚಕನ ಮಾತು ನಂಬಿ, ಆತ ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ 10.77 ಲಕ್ಷ ಹಣ ವರ್ಗಾವಣೆ ಮಾಡಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.