ಭಾರತದ ವಿರುದ್ಧ ಆತ್ಮಾಹುತಿ ದಾಳಿಗೆ ಸಂಚು ರೂಪಿಸುತ್ತಿದ್ದ ಐಸಿಸ್ ಉಗ್ರ ರಷ್ಯಾದಲ್ಲಿ ಬಂಧನ
- 6 Jan 2024 , 7:50 PM
- world
- 115
ಆಡಳಿತ ವಲಯಗಳ ಸದಸ್ಯರನ್ನು ಗುರಿಯಾಗಿಸಿಕೊಂಡು ಭಾರತದಲ್ಲಿ ದಾಳಿ ನಡೆಸಲು ಯೋಜಿಸುತ್ತಿದ್ದ ಇಸ್ಲಾಮಿಕ್ ಸ್ಟೇಟ್ ಆತ್ಮಹತ್ಯಾ ಬಾಂಬರ್ ಅನ್ನು ಬಂಧಿಸಿರುವುದಾಗಿ ರಷ್ಯಾದ ಭದ್ರತಾ ಸಂಸ್ಥೆ ಹೇಳಿಕೊಂಡಿದೆ. ಭಯೋತ್ಪಾದಕ ರಷ್ಯಾದ ವಶದಲ್ಲಿದ್ದು, ಇಸ್ಲಾಮಿಕ್ ಸ್ಟೇಟ್ (ಐಎಸ್ಐಎಸ್) ಆಪರೇಟಿವ್ ಆಗಿರಬಹುದು ಎಂದು ತಿಳಿದು ಬಂದಿದೆ .
ರಷ್ಯಾದ ಒಕ್ಕೂಟದ ಫೆಡರಲ್ ಸೆಕ್ಯುರಿಟಿ ಸರ್ವೀಸ್‌ನ ಹೇಳಿಕೆಯು ಮಧ್ಯ ಏಷ್ಯಾದ ದೇಶದಿಂದ ಬಂದಿರುವ ಆತ್ಮಹತ್ಯಾ ಬಾಂಬರ್‌ನ ಬಂಧನದ ಕುರಿತು ಮತ್ತು ಭಾರತದಲ್ಲಿ ಆಡಳಿತಾರೂಢ ಸರ್ಕಾರದ ಉನ್ನತ ಸದಸ್ಯರ ಮೇಲೆ ದಾಳಿ ಮಾಡಲು ಯೋಜಿಸುತ್ತಿದೆ. ಭಯೋತ್ಪಾದಕನನ್ನು ಇತ್ತೀಚಿನ ತಿಂಗಳುಗಳಲ್ಲಿ ಟರ್ಕಿಯಲ್ಲಿ ಐಸಿಸ್ ನೇಮಕ ಮಾಡಿತ್ತು.
ಭಯೋತ್ಪಾದಕ ತನ್ನ ತಪ್ಪೊಪ್ಪಿಗೆಯಲ್ಲಿ ತಾನು ಭಾರತದಲ್ಲಿ ಯೋಜಿಸುತ್ತಿದ್ದ ಆತ್ಮಾಹುತಿ ದಾಳಿಯನ್ನು ಇತ್ತೀಚೆಗೆ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು "ಪ್ರವಾದಿಯನ್ನು ಅವಮಾನ ಮಾಡಿದ್ದ ಪ್ರತೀಕಾರವಾಗಿ ದಾಳಿಯ್ ಕಾರಣ ಎಂದು ಹೇಳಿದ್ದಾನೆ. ಇದು ಅತ್ಯಂತ ಗಂಭೀರ ಬೆಳವಣಿಗೆಯಾಗಿದ್ದು, ಭಾರತೀಯ ಗುಪ್ತಚರ ಸಂಸ್ಥೆಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.
Video released by FSB of IS operative which Russian authorities have said was planning a suicide attack in India: pic.twitter.com/xfxxV0w5lz
— Sidhant Sibal (@sidhant) August 22, 2022