ಅದು ಆನೆಯಲ್ಲ ಕಾಡಾನೆ.. ಜನರ ಹುಚ್ಚಾಟ
- shivaraj bandigi
- 1 Mar 2024 , 9:09 AM
- Belagavi
- 494
ಬೆಳಗಾವಿ
ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬಂದ ಕಾಡಾನೆಯೊಂದು ಶುಕ್ರವಾರ ನಸುಕಿನ ಜಾವ ನಗರದಲ್ಲಿ ಸಂಚರಿಸಿ ಕಂಗ್ರಾಳಿಲ್ಲಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತು. ಅದೃಷ್ಟವಶಾತ್ ಯಾವುದೇ ಜೀವಕ್ಕೆ ಮತ್ತು ಆಸ್ತಿ, ಪಾಸ್ತಿಗೆ ಹಾನಿ ಸಂಭವಿಸಿಲ್ಲ. ನಸುಕಿನ ಜಾವ ವಾಕಿಂಗ್ ಹೋಗುತ್ತಿದ್ದ ಜನ ಮೊದಲು ಆನೆಯನ್ನು ಕಂಡು ದಂಗಾದರು. ಈ ವಿಷಯ ನಗರದಲ್ಲಿ ಹರಡುತ್ತಿದ್ದಂತೆ ಜನ ತಂಡೋಪತಂಡವಾಗಿ ಆಗಮಿಸಿ ಆನೆ ನೋಡಲು ಮುಗಿಬಿದ್ದರು. ಸಿಹಿ ನಿದ್ದೆಯಲ್ಲಿದ್ದ ಜನ ಗಾಬರಿ ಬೀಳುವಂತಾಯಿತು. ಸುಮಾರು ಮೂರು ಗಂಟೆಗಳ ಕಾಲ ಸಂಚರಿಸಿದ ಆನೆ ಉಚಗಾವಿ ಕಡೆ ಸಾಗಿತು. ಆನೆಯನ್ನು ಹಿಡಿಯಲು ಅರಣ್ಯಾಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಕಳೆದ ವರ್ಷ ಚಿರತೆ ಪ್ರತ್ಯೇಕವಾಗಿ ಜನರಲ್ಲಿ ಆತಂಕ ಸೃಷ್ಟಿ ಮಾಡಿ ಓರ್ವನಿಗೆ ಗಾಯ ಮಾಡಿ ಹೋಗಿತ್ತು. ಈಗ ಆನೆ ಕಂಡ ಜನರಲ್ಲಿ ಆತಂಕ ಸೃಷ್ಟಿಸಿದ್ದರೆ, ಇನ್ನೂ ಕೆಲವರು ಮೊಬೈಲ್ ನಲ್ಲಿ ಸೆಲ್ಸಿ ತೆಗೆಯುತ್ತ ಹುಚ್ಚಾಟ ಮೆರೆಯುತ್ತಿದ್ದಾರೆ.