ಜಾಗನೂರ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಆಯ್ಕೆ
ಚಿಕ್ಕೋಡಿ ತಾಲೂಕಿನ ಜಾಗನೂರ್ ಗ್ರಾಮ ಪಂಚಾಯತ್ ಚುನಾವಣೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಒಟ್ಟು ಮೂರು ನಾಮಪತ್ರ ಸಲ್ಲಿಕೆ ಯಾಗಿದು ಉಪಾಧ್ಯಕ್ಷ ಸ್ಥಾನಕ್ಕೆ ಎರೆಡು ನಾಮಪತ್ರ ಸಲ್ಲಿಸಿದ್ದರು.
ಸಾಮಾನ್ಯ ಸಭೆ ಕರೆದು ನಾಮಪತ್ರ ಪರಿಶೀಲನೆ ಮಾಡಲಾಯಿತು. ಜಗನೂರು ಗ್ರಾಮ ಪಂಚಾಯಿತಿಯ 31 ಸದಸ್ಯರು ಸಭೆಗೆ ಹಾಜರಿದ್ದರು. ಅಧ್ಯಕ್ಷ ಸ್ಥಾನಕೆ ಮೂರು ನಾಮಪತ್ರ ಹಾಗೂ ಉಪಾಧ್ಯಕ್ಷ ಸ್ಥಾನಕೆ ಎರೆಡು ನಾಮಪತ್ರ ಸಲ್ಲಿಸಿದ್ದರಿಂದ ಗುಪ್ತ ಮತದಾನ ನಡೆಸಲಾಯಿತು
ಈ ಗುಪ್ತ ಮತದಾನದಲ್ಲಿ ಹೆಚ್ಚು ಮತಗಳು ಪಡೆದ ಅಧ್ಯಕ್ಷರಾಗಿ ಲಕ್ಶ್ಮಣ ಮಂಗಿ ಹಾಗೂ ಉಪಾಧ್ಯಕ್ಷರಾಗಿ ಲಷ್ಮಿ ಹನುಮಂತಗೋಳ ಚುನಾವಣಾಧಿಕಾರಿಗಳಾದ ಡಾ.ಮಲ್ಲಪ್ಪಾ ರಾಹುತನವರ ಪ್ರಕಟಿಸಿದರು.
ಈ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.
ಈ ವೇಳೆ ನೂತನವಾಗಿ ಆಯ್ಕೆ ಆಗಿರುವ ಅದ್ಯೇಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಸತ್ಕಾರ ಹಾಗೂ ಸದಸ್ಯರಿಗೆ ಕೂಡಾ ಈ ವೇಳೆ ಸತ್ಕಾರ ಮಾಡ್ಲಯಿತು.
ಈ ಸಂದರ್ಭದಲಿ ನೂತನವಾಗಿ ಅದೇಕ್ಷ ಸ್ಥಾನಕೆ ಆಯ್ಕೆಯಾಗಿರುವ ಶ್ರೀ ಲಕ್ಷಮನ ಮಂಗಿಯವರು ಮಾತನಾಡಿ ಸರ್ವ ಸದಸ್ಯರಿಗೆ ಹಾಗೂ ಮುಖಂಡರಿಗೆ ಧನ್ಯವಾದಗಳನ್ನು ಹೇಳಿದರು.
ಈ ಸಂದರ್ಭಗಳಲ್ಲಿ ಜಾಗನೂರ ಗ್ರಾಮ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸರ್ವ ಸದಸ್ಯರು ಹಾಗೂ ಗ್ರಾಮ ಪಂಚಾಯತಿ ಮುಖಂಡರು ಉಪಸ್ಥಿತರಿದ್ದರು.