ಕುಡಚಿ ಸೇತುವೆ ವರ್ಷದಲ್ಲಿ ಎರಡನೇಯ ಬಾರಿಗೆ ಮುಳುಗಡೆಯಾಗಿ ದಾಖಲೆ
- shivaraj B
- 29 Aug 2024 , 10:58 AM
- Chikodi
- 4614
ಚಿಕ್ಕೋಡಿ : ರಾಯಬಾಗ ತಾಲೂಕಿನ ಕುಡಚಿ ಪಟ್ಟಣ ಹಾಗೂ ಕಾಗವಾಡ ತಾಲೂಕಿನ ಉಗಾರ ಮದ್ಯ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾದ ಕುಡಚಿ ಸೇತುವೆ ವರ್ಷದ ಅವಧಿಯಲ್ಲಿ ಸತತವಾಗಿ ಎರಡು ಬಾರಿ ಜಲಾವೃತವಾಗಿ ದಾಖಲೆ ನಿರ್ಮಿಸಿದೆ.
ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗ ಕುಡಚಿ ಕೃಷ್ಣಾ ನದಿ ಸೇತುವೆ ಜಲಾವೃತವಾಗಿದ್ದು, ಕರ್ನಾಟಕ ಮಹಾರಾಷ್ಟ್ರ ರಾಜ್ಯದ ಸಂಪರ್ಕದ ಕೊಂಡಿ ಇದಾಗಿದ್ದು, ಸಂಪೂರ್ಣವಾಗಿ ಜಲಾವೃತಗೊಂಡ ಹಿನ್ನಲೆಯಲ್ಲಿ ಕುಡಚಿ ಪೋಲಿಸ್ ಠಾಣಾ ವತಿಯಿಂದ ಬ್ಯಾರಿಗೇಟ ಹಾಕೀ ವಾಹನ ಸಂಚಾರ ಬಂದಮಾಡಲಾಗಿದೆ.
ಸಾರ್ವಜನಿಕರು ಮಹಾರಾಷ್ಟ್ರದ ಆಸ್ಪತ್ರೆಗೆ ಹಾಗೂ ಇನ್ನಿತರ ಕಾರ್ಯಗಳಿಗೆ ತೆರಳಲು ಪರದಾಡುವ ಪರಿಸ್ಥಿತಿ ಉಂಟಾಗಿದೆ.
ವರದಿ : ರಾಹುಲ್ ಮಾದರ