ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಹೆಸರಿನಲ್ಲಿ ಭೂಮಿ ಕಬಳಿಕೆ:ರೈಭಾಗದಲ್ಲಿ ರೈತರ ತೀವ್ರ ಆಕ್ರೋಶ
ರಾಯಬಾಗ: ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಹೆಸರಿನಲ್ಲಿ ರೈತರ ಭೂಮಿಯನ್ನು ಕಬಳಿಸುವ ಪ್ರಯತ್ನದ ವಿರುದ್ಧ ರೈತರ ಮತ್ತು ನಾಗರಿಕರ ಆಕ್ರೋಶ ಉಲ್ಬಣಗೊಳ್ಳುತ್ತಿದೆ. ರಾಜ್ಯದ ಹಲವೆಡೆ ಬಡ ರೈತರ ಭೂಮಿಯನ್ನು ವಕ್ಫ್ ಮಂಡಳಿಯ ಆಸ್ತಿಯೆಂದು ಘೋಷಿಸಿ ದೂರುಪಯೋಗ ಮಾಡುತ್ತಿರುವ ಕುರಿತು ರಾಜ್ಯದ ಜನತೆ ಆತಂಕಗೊಂಡಿದೆ. ಕೇಂದ್ರ ಸರಕಾರದ ಶಿಫಾರಸ್ಸಿನಂತೆ ತಿದ್ದುಪಡಿ ತರಲಾಗುತ್ತಿರುವ ವಕ್ಸ್ ಕಾಯ್ದೆಯ ಮೇಲೆ ರಾಜ್ಯದ ಕಾಂಗ್ರೆಸ್ ಸರಕಾರ ನಿರ್ಲಕ್ಷ್ಯ ತೋರಿಸುತ್ತಿರುವುದಾಗಿ ಆರೋಪಿಸಲಾಗಿದೆ.
ವಿಜಯಪುರ ಜಿಲ್ಲೆಯ ಹೊನ್ನಾವಡದ 1500 ಎಕರೆ ಜಮೀನುವಕ್ಫ್ ಆಸ್ತಿಯೆಂದು ಘೋಷಿಸಿ ರೈತರಿಗೆ ನೋಟಿಸ್ ನೀಡಲಾಗಿದೆ. ಇದಲ್ಲದೆ, ಬೆಂಗಳೂರು ವಿಧಾನಸೌಧ ಮತ್ತು ಹಾವೇರಿ ಜಿಲ್ಲೆಯ 1649 ಆಸ್ತಿಗಳಿಗೂ ವಕ್ಫ್ ಮಂಡಳಿಯ ಹಕ್ಕು ಪ್ರತಿಪಾದನೆ ಬಂದಿದೆ. ಸವಣೂರು ತಾಲ್ಲೂಕಿನ ಹನುಮಂತ ದೇವಸ್ಥಾನ ಮತ್ತು ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣ ಪಂಚಾಯತಿ ಕಾರ್ಯಾಲಯದ ಮೇಲೆ ವಕ್ಸ್ ಮಂಡಳಿಯ ಹಕ್ಕು ಪ್ರಕ್ರಿಯೆ ಮುಂದುವರೆದಿದೆ. ಇವುಗಳೆಲ್ಲಾ ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ರಾಯಬಾಗ ಮತ್ತು ಕುಡಚಿಯಲ್ಲಿ ಹೋರಾಟ:
ರಾಜ್ಯದ ರೈತರು ಮತ್ತು ಸಾರ್ವಜನಿಕರು ಸಿಡಿದುಕೊಂಡು, ರಾಯಬಾಗದ ಝೆಂಡಾಕಟ್ಟಿ ಮುಖ್ಯ ರಸ್ತೆಯನ್ನು ಆರೆಡು ಗಂಟೆಗಳ ಕಾಲ ಅಡ್ಡಗಟ್ಟಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಪ್ರತಿಭಟನೆಯಲ್ಲಿ ಶಾಸಕರಾದ ಡಿ.ಎಮ್.ಐಹೊಳೆ, ಮಹೇಶ ಬಾತೆ, ತಾಲುಕಾ ಅಧ್ಯಕ್ಷ ಪ್ರತ್ವಿರಾಜ ಜಾಧವ ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಭಾಗವಹಿಸಿದರು. ಜನರಲ್ಲಿ ಕಿಡಿ ಹೊತ್ತಿಸಿರುವ ಈ ಘಟನೆಯಲ್ಲಿ ಭಾಗಿಯಾದವರು, ರಾಜ್ಯ ಸರ್ಕಾರ ತಕ್ಷಣವೇ ಈ ದುರುಪಯೋಗವನ್ನು ನಿಲ್ಲಿಸಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದರಿಂದಾಗಿ, ರಾಜ್ಯದ ರೈತರು ಮತ್ತು ಸಾರ್ವಜನಿಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸುತ್ತಿದ್ದಾರೆ. ಜನರ ಆಸ್ತಿಯ ರಕ್ಷಣೆಗೆ ರಾಜ್ಯ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.