ವಕ್ಫ್ ಬೋರ್ಡ್ ಸಂಪರ್ಕಿತ ಭೂಮಿಗಳ ಎಲ್ಲಾ ನೋಂದಣಿ ಮತ್ತು ವ್ಯವಹಾರಗಳನ್ನು ಸ್ಥಗಿತಗೊಳಿಸಲು R ಅಶೋಕ್ ಕೇಂದ್ರಕ್ಕೆ ಪತ್ರ
ಬೆಂಗಳೂರು: ಕರ್ನಾಟಕದಲ್ಲಿ ವಕ್ಫ್ ಬೋರ್ಡ್ ದೌರ್ಜನ್ಯಗಳ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಕ್ಫ್ (ತಿದ್ದುಪಡಿ) ಮಸೂದೆ 2024ರ ಸಂಯುಕ್ತ ಸಂಸತ್ತೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರಿಗೆ ಪತ್ರ ಬರೆದಿರುವ R ಅಶೋಕ್, ರಾಜ್ಯದ ಮುಖ್ಯ ಕಾರ್ಯದರ್ಶಿಗೆ ತಕ್ಷಣವೇ ವಕ್ಫ್ ಬೋರ್ಡ್ ಸಂಪರ್ಕಿತ ಭೂಮಿಗಳ ಎಲ್ಲಾ ನೋಂದಣಿ ಮತ್ತು ವ್ಯವಹಾರಗಳನ್ನು ಸ್ಥಗಿತಗೊಳಿಸುವಂತೆ ಆದೇಶ ನೀಡುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಆರ್ ಅಶೋಕ್ ಅವರು ನೀಡಿರುವ ಪತ್ರದಲ್ಲಿ, ರಾಜ್ಯದಲ್ಲಿ ವಕ್ಫ್ ಬೋರ್ಡ್ ಮಾಡಿರುವ ಭೂಮಿಯ ದಾಖಲೆ ಮತ್ತು ವ್ಯಾಪಾರಗಳನ್ನು ತಡೆದು, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ಕ್ರಮಗಳನ್ನು ತಕ್ಷಣವೇ ನಿಲ್ಲಿಸಲು ಸೂಚನೆ ನೀಡುವ ಅಗತ್ಯತೆಯ ಬಗ್ಗೆ ಉಲ್ಲೇಖಿಸಿದ್ದಾರೆ.