ಲೋಕಾ ಬಲೆಗೆ ಪಂಚಾಯತ್ ರಾಜ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ
- shivaraj B
- 11 Jul 2024 , 2:09 PM
- Belagavi
- 1583
ಬೆಳಗಾವಿ : ಜಿಲ್ಲಾ ಪಂಚಾಯತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಹಾದೇವ ಬನ್ನೂರ ಮನೆ ಮೇಲೆ ಬೆಳಗಾವಿಯ ಲೋಕಾಯುಕ್ತ ಡಿವೈಎಸ್‌ಪಿ ಭರತ್ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಬೆಳ್ಳಂಬೆಳಿಗ್ಗೆ ಒಟ್ಟು ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಯಳ್ಳೂರ ಗ್ರಾಮದಲ್ಲಿರುವ ಮಹಾದೇವ ನಿವಾಸ.
ವಿಜಯನಗರದಲ್ಲಿರುವ ಪುತ್ರನ ನಿವಾಸ, ಹೊನಗಾದಲ್ಲಿರುವ ಫಾರ್ಮ್ ಹೌಸ್, ಗೋಕಾಕ್ ನಗರದಲ್ಲಿರುವ ನಿವಾಸದ ಮೇಲೆಯೂ ಕೂಡಾ ದಾಳಿ ನಡೆಸಿದ್ದಾರೆ.
ನಾಲ್ಕು ಜನ ಅಧಿಕಾರಿಗಳ ನೇತೃತ್ವದಲ್ಲಿ ಇಪ್ಪತ್ತು ಜನ ಸಿಬ್ಬಂದಿಯಿಂದ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು,
ನಾಲ್ಕು ತಿಂಗಳುಗಳ ಹಿಂದೆ ಗುತ್ತಿಗೆದಾರ ಓರ್ವನಿಂದ ಹಣ ಪಡೆಯುವ ವೇಳೆ ಟ್ರ್ಯಾಪ್ ಆಗಿದ್ದ ಮಹಾದೇವ ಬನ್ನೂರ ಮನೆಯಲ್ಲಿ ತಪಾಸಣೆ ನಡೆಸಿದಾಗ 27ಲಕ್ಷ ನಗದು ಹಣ ಸಿಕ್ಕಿತ್ತು.
ಆ ಹೊತ್ತಿನಿಂದ ಮಹಾದೇವ ಬನ್ನೂರ ಅವರ ಮೇಲೆ ಲೋಕಾ ಅಧಿಕಾರಿಗಳು ಹದ್ದನಿ ಕಣ್ಣು ಇಟ್ಟಿದ್ದರು.