"ಮಹಾರಾಷ್ಟ್ರ ರಾಜ್ಯ ಕೌಶಲ್ಯ ವಿಶ್ವವಿದ್ಯಾಲಯಕ್ಕೆ ದಿವಂಗತ ರತನ್ ಟಾಟಾ ಅವರ ಹೆಸರು"

 ಮಹಾರಾಷ್ಟ್ರ: ಮಹಾರಾಷ್ಟ್ರ ರಾಜ್ಯ ಕೌಶಲ್ಯ ವಿಶ್ವವಿದ್ಯಾಲಯವನ್ನು ದಿವಂಗತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಹೆಸರಿನಲ್ಲಿ ಮರುನಾಮಕರಣ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಮಹಾರಾಷ್ಟ್ರ ರಾಜ್ಯ ಕೌಶಲ್ಯಾಭಿವೃದ್ಧಿ ಸಚಿವ ಮಂಗಲ್ ಪ್ರಭಾತ್ ಲೋಧಾ ಈ ವಿಷಯವನ್ನು ಸೋಮವಾರ ಪ್ರಕಟಿಸಿದರು. ಮುಂಬೈನ ಬ್ರಿಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅಕ್ಟೋಬರ್ 9 ರಂದು 86ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ರತನ್ ಟಾಟಾ ಅವರನ್ನು ಗೌರವಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

Your Image Ad

   ಈ ಮರುನಾಮಕರಣದೊಂದಿಗೆ, ಕೋಶಾಲಯ ವಿಶ್ವವಿದ್ಯಾಲಯವು ಈಗ "ಪದ್ಮ ವಿಭೂಷಣ ರತನ್ ಟಾಟಾ ಮಹಾರಾಷ್ಟ್ರ ರಾಜ್ಯ ಕೌಶಲ್ಯ ವಿಶ್ವವಿದ್ಯಾಲಯ" ಎಂದು ಕರೆಯಲ್ಪಡುವುದು.

Your Image Ad