ಕರ್ನಾಟಕ ರಾಜ್ಯೋತ್ಸವದ ಮುನ್ನ ಎಂ.ಇ.ಎಸಗೆ ಕರಾಳ ದಿನಾಚರಣೆಗೆ ಅನುಮತಿ ನೀಡಬಾರದು: ಗುಡಗನಟ್ಟಿ
ಬೆಳಗಾವಿ:ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಬೆಳಗಾವಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂ.ಇ.ಎಸ್.) ಅವರ “ಕರಾಳ ದಿನಾಚರಣೆ”ಗೆ ಸರ್ಕಾರವು ಅನುಮತಿ ನೀಡದಂತೆ ದೀಪಕ್ ಗುಡಗನಟ್ಟಿ ಒತ್ತಾಯಿಸಿದ್ದಾರೆ.
ಪ್ರತಿ ವರ್ಷವೂ ಎಂ.ಇ.ಎಸ್. ಗೆ ಈ ಕಾರ್ಯಕ್ರಮ ನಡೆಸಲು ಕೊನೆಯ ಕ್ಷಣದಲ್ಲಿ ಸರ್ಕಾರವು ಅನುಮತಿ ನೀಡುತ್ತದೆ, ಆದರೆ ಈ ಬಾರಿ ಯಾವುದೇ ಕಾರಣಕ್ಕೂ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಗುಡಗನಟ್ಟಿ ತೀವ್ರವಾಗಿ ವಾದಿಸುತ್ತಿದ್ದಾರೆ.ಇಂತಹ ಕಾರ್ಯಕ್ರಮಗಳು ಇಲ್ಲಿನ ಕನ್ನಡ ಮತ್ತು ಮರಾಠಿ ಸಮುದಾಯಗಳ ನಡುವಿನ ಶಾಂತಿಯುತ ಸಹವಾಸವನ್ನು ಹಾನಿ ಮಾಡುತ್ತವೆ. ಸರ್ಕಾರವು ಈ ಕಾರ್ಯಕ್ರಮಕ್ಕೆ ಅನುಮತಿ ನೀಡದ ಮೂಲಕ ಸಮುದಾಯದಲ್ಲಿ ಶಾಂತಿ ಕಾಪಾಡಬೇಕು ಎಂದು ಅವರು ಹೇಳಿದ್ದಾರೆ.
ಗುಡಗನಟ್ಟಿ ಅವರು,ಎಂ.ಇ.ಎಸ್. ತನ್ನ ರಾಜಕೀಯ ಪ್ರಭಾವವನ್ನು ಕಳೆದುಕೊಂಡಿದ್ದು, ಅದನ್ನು ಪುನಃ ಪಡೆಯಲು ಈ ತರದ ದಿನಾಚರಣೆಗಳನ್ನು ಆಯೋಜಿಸುತ್ತಿದೆ. ಇದು ಬೆಳಗಾವಿಯ ಶಾಂತಿಯುತ ಪರಿಸರಕ್ಕೆ ಮಾರಕವಾಗುತ್ತದೆ,ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ರಾಜಕಾರಣಿಗಳು ಬೆಳಗಾವಿಗೆ ಪ್ರವೇಶಿಸಲು ಪ್ರಯತ್ನಿಸಿದರೆ, ಅವರನ್ನು ಗಡಿಯಲ್ಲಿ ಬಂಧಿಸಬೇಕೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.