ಜಾನುವಾರುಗಳ ಮೇವಿಗಾಗಿ ನದಿಪಾತ್ರದ ರೈತರ ಪರದಾಟ

ಚಿಕ್ಕೋಡಿ : ಕೃಷ್ಣಾ ನದಿಯಿಂದಾಗಿ ಉಂಟಾದ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ತತ್ವಾರ ಉಂಟಾಗಿದ್ದು, ಮೇವಿಗಾಗಿ ನದಿಪಾತ್ರದ ರೈತರ ಹರಸಾಹಸ ಪಡುವಂತಾಗಿದೆ. 

promotions

ಕಾಗವಾಡ ತಾಲೂಕಿನ ಕೃಷ್ಣಕಿತ್ತೂರು, ಬನಜವಾಡ, ಕಾತ್ರಾಳ, ಮಳವಾಡ, ಕುಸುನಾಳ, ಮಳವಾಡ ಸೇರಿದಂತೆ ಸುತ್ತಮುತ್ತಲಿನ ಜನರು, ಜಾನುವಾರುಗಳೊಂದಿಗೆ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದು, 

promotions

ತಾಲೂಕಾಡಳಿತ ಜಾನುವಾರುಗಳಿಗೆ ಸರಿಯಾದ ಪ್ರಮಾಣದಲ್ಲಿ ಮೇವು ವಿತರಣೆ ಮಾಡುತ್ತಿಲ್ಲ‌ ಪ್ರತಿ ಜಾನುವಾರುಗಳಿಗೆ 7 KG ಅಷ್ಟೇ ಮೇವು ವಿತರಣೆ ಮಾಡುತ್ತಿದ್ದು ಅದು ಜಾನುವಾರುಗಳಿಗೆ ಸಾಕಾಗುತ್ತಿಲ್ಲ ಹೀಗಾಗಿ ನಾವು ನದಿ ದಾಟಿಕೊಂಡು ಆಚೆಗೆ ಹೊರಟು ಮೇವು ಮಾಡಿಕೊಂಡು ಬರಬೇಕಾಗಿದೆ.

ಸೂಕ್ತ ಮೇವಿನ ವ್ಯವಸ್ಥೆ ಮಾಡುವಂತೆ ರೈತರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

Read More Articles