
ಮೋದಿ ವಿಶ್ವನಾಯಕ! ಸಂಕಲ್ಪ ಶೆಟ್ಟರ
- shivaraj bandigi
- 20 Apr 2024 , 10:18 AM
- Belagavi
- 403
ಬೈಲಹೊಂಗಲ : ಕಾಂಗ್ರೆಸ್ ದುರಾಡಳಿತದಿಂದ ಹದಗೆಟ್ಟ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿ, ಇಡಿ ವಿಶ್ವವೇ ಭಾರತದತ್ತ ಮುಖ ಮಾಡುವಂತೆ ಮಾಡಿದ ಪ್ರಧಾನಿ ಮೋದಿಯವರನ್ನು ಮತ್ತೊಮ್ಮೆ ಆಯ್ಕೆ ಮಾಡಲು ನಾವೆಲ್ಲ ಶ್ರಮಿಸಬೇಕಿದೆ ಎಂದು ಸಂಕಲ್ಪ ಶೆಟ್ಟರ ಹೇಳಿದರು.

ಅವರು ಶನಿವಾರ ಪಟ್ಟಣದ ವಿವಿದ ಬಡಾವಣೆಗಳ ಮನೆ ಮನೆಗೆ ತೆರಳಿ ಬೆಳಗಾವಿ ಲೋಕಸಭಾ ಅಭ್ಯರ್ಥಿ ಜಗದೀಶ ಶಟ್ಟರ ಪರ ಪ್ರಚಾರ ನಡೆಸಿ ಮಾತನಾಡಿ, ಕಳೆದ ಹತ್ತು ವರ್ಷಗಳ ಮೋದಿ ಸರ್ಕಾರದ ಆಡಳಿತದಲ್ಲಿ ಹಲವಾರು ಜನಪ್ರೀಯ ಯೋಜನೆಗಳು ಜಾರಿಗೆ ಬಂದಿದ್ದು ಪ್ರತಿಯೊಬ್ಬರಿಗೂ ಅನೂಕೂಲಕರ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್ಸಿನವರ ದುರಾಡಳಿತಕ್ಕೆ ಬೇಸತ್ತ ಜನರು ಉತ್ತಮ ನಾಯಕನನ್ನು ಆಯ್ಕೆ ಮಾಡಿದ್ದಾರೆ ಎಂದರು.

ಮೂರನೇಯ ಬಾರಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಲು ಅವರ ಕೈ ಬಲಪಡಿಸಬೇಕಿದೆ ಆದ್ದರಿಂದ ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಅವರಿಗೆ ಮತ ನೀಡಿ ಹೆಚ್ಚಿನ ಬಹುಮತದಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಮಾತನಾಡಿ, ದೇಶದ ಸುಭದ್ರತೆಗೆ ಮೋದಿಯವರ ಆಯ್ಕೆ ಪ್ರಾಮುಖ್ಯತೆ ಪಡೆದಿದ್ದು, ನಾವೆಲ್ಲ ಬಿಜೆಪಿ ಮತ ನೀಡಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಲು ಸಂಕಲ್ಪ ಮಾಡೋನ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಪುರಸಭೆ ಸದಸ್ಯ ಗುರು ಮೆಟಗುಡ್ಡ, ವಿಜಯ ಮೆಟಗುಡ್ಡ ಮಾತನಾಡಿ, ಜಗದೀಶ ಶೆಟ್ಟರ ಅವರಿಗೆ ಬೈಲಹೊಂಗಲ ವಿಧಾನಸಭಾ ಮತಕ್ಷೇತ್ರದಿಂದ ಅತೀ ಹೆಚ್ಚಿನ ಬಹುಮತ ನೀಡುವಂತೆ ಮನವಿ ಮಾಡಿದರು.
ಮಂಡಲ ಅಧ್ಯಕ್ಷ ಗುರುಪಾದ ಕಳ್ಳಿ, ಮುಖಂಡರಾದ ರಾಜು ಕುಡಸೋಮಣ್ಣವರ, ಶಿವಾನಂದ ಕೋಲಕಾರ, ಪುರಸಭೆ ಸದಸ್ಯ ಸಾಗರ ಭಾವಿಮನಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
ವರದಿ : ರವಿಕಿರಣ್ ಯಾತಗೇರಿ