
ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ ಸಂಸದ ಶೆಟ್ಟರ ಭವಿಷ್ಯ
- shivaraj B
- 8 Oct 2024 , 12:12 PM
- Belagavi
- 294
ಬೆಳಗಾವಿ : ಎಲ್ಲ ಎಕ್ಸಿಟ್ ಪೋಲಗಳನ್ನು ತಲೆಕೆಳಕಾಗಿ ಮಾಡಿ ಹರ್ಯಾಣದಲ್ಲಿ ಬಿಜೆಪಿ ಮೂರನೇಯ ಭಾರಿಗೆ ಅಧಿಕಾರಕ್ಕೆ ಬಂದು ಸರ್ಕಾರ ರಚನೆ ಮಾಡುತ್ತಿರುವದು ಸಂತಸ ತಂದಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದರು.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಎಲ್ಲ ಎಕ್ಸಿಟಪೋಲ್ ಗಳು ಸುಳ್ಳಾಗಿದ್ದು ಇವುಗಳನ್ನು ತೆಗೆದುಹಾಕಬೇಕು. ಬಿಜೆಪಿ ಯಾವುದೇ ಕಾರಣಕ್ಕೆ ಅಧಿಕಾರಕ್ಕೆ ಬರಲ್ಲ ಅಂತಾ ಸಮೀಕ್ಷೆಗಳು ಹೇಳಿದ್ದವು ಆದರೆ, ಎಲ್ಲರ ನಿರೀಕ್ಷೆಗಳನ್ನು ಮೀರಿ ಹರ್ಯಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದರು.

ಅಲ್ಲಿನ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ ಮತ್ತೊಂದೆಡೆ ಜಮ್ಮುಕಾಶ್ಮೀರದಲ್ಲೂ ಬಿಜೆಪಿ ಅತಿಹೆಚ್ಚಿನ ಸಾಧನೆ ಮಾಡಿದೆ. ಹೆಚ್ಚಿನ ಪ್ರಾಬಲ್ಯವನ್ನು ಸಾಧಿಸಿದೆ ಸ್ವಾಗತಾರ್ಹ ರೀತಿಯಲ್ಲಿ ಜಮ್ಮು ಕಾಶ್ಮೀರದಲ್ಲಿ ಚುನಾವಣೆಯಾಗಿದೆ ಎಂದರು.
ಇದು ಪ್ರಜಾಪ್ರಭುತ್ವದ ಗೆಲುವು ಜಮ್ಮು ಭಾರತದ ಒಂದು ಅಂಗ ಚುನಾವಣೆ ಆಯೋಗ ಕೂಡ ಉತ್ತಮ ಕಾರ್ಯ ಮಾಡಿದೆ.
370 ಕಾಯ್ದೆ ತೆಗೆದುಹಾಕಿದ್ದಕ್ಕೆ ಜಮ್ಮುಕಾಶ್ಮೀರದಲ್ಲಿ ಭಯದ ವಾತಾವರಣ ಹೊರಟು ಹೋಗಿದೆ, ಕಾನೂನು ಸುವ್ಯವಸ್ಥೆ ಕಂಟ್ರೋಲ್ ನಲ್ಲಿದೆ ಜನರು ಸರತಿ ಸಾಲಿನಲ್ಲಿ ನಿಂತು ವೋಟ ಮಾಡಿದ್ದಾರೆ ಎಂದರು.
ಜಮ್ಮು ಕಾಶ್ಮೀರದಲ್ಲಿ ಭಾರತ ಅವಿಭಾಜ್ಯ ಅಂಗ ಎನ್ನುವ ರೀತಿಯಲ್ಲಿ ಜನರು ತೀರ್ಪು ಕೊಟ್ಟಿದ್ದಾರೆ. ಚುನಾವಣೆ ಆಯೋಗದ ಮೇಲೆ ಕಾಂಗ್ರೆಸ್ ವಿನಾಕರಣ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ನೆಕ್ಟು ನೆಕ್ಕ ಪೈಟ್ ಇದ್ದಾಗ ಫಲಿತಾಂಶ ಹಿಂದೆ ಮುಂದೆ ಆಗೋದು ಸಹಜ ಕಾಂಗ್ರೆಸ್ ನ ಈ ರೀತಿಯ ನಡುವಳಿಕೆ ಒಳ್ಳೆಯದ್ದಲ್ಲ ಎರಡು ಚುಮಾವಣೆ ಫಲಿತಾಂಶ ಪ್ರಧಾನಿ ನರೇಂದ್ರ ನೋದಿ ನಾಯಕತ್ವದ ಶೀಲ ಹಾಕಿದಂತಿದೆ.
ಮಹಾರಾಷ್ಟ್ರದಲ್ಲೂ ಇದೇ ಫಲಿತಾಂಶ ರೀಪಿಟ್ ಆಗುತ್ತೆ, ಅಲ್ಲಿಯೂ ಬಿಜೆಪಿ ಸರ್ಕಾರ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಕ್ಷಿಣ ಭಾರತದಲ್ಲಿ ಕರ್ನಾಟಕದ ಅಭಿವೃದ್ಧಿ ರಾಜ್ಯವಾಗಿದೆ ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಹಗರಣ, ಭ್ರಷ್ಟಾಚಾರಗಳಿಂದ ತುಂಬಿ ತುಳಕಾಡುತ್ತಿದೆ.
ಕರ್ನಾಟಕ ಇತಿಹಾಸದಲ್ಲೇ ಇಷ್ಟು ದೊಡ್ಡ ಅಕ್ರಮ ಯಾವಾಗಲೂ ನಡೆದಿರಲಿಲ್ಲ. ಕಾಂಗ್ರೆಸ್ ಗ್ಯಾರಂಟಿಯನ್ನು ಜನರು ತಿರಸ್ಕಾರ ಮಾಡಿದ್ದಾರೆ ಇವತ್ತಲ್ಲ ನಾಳೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟೇಕೊಡುತ್ತಾರೆ, ಸಿಎಂ ರಾಜೀನಾಮೆ ಕೊಡದಿದ್ದರೆ ಜನರೇ ದಂಗೆ ಎಳ್ಳುತ್ತಾರೆ ಎಂದರು.
ಕಾಂಗ್ರೆಸ್ ನಲ್ಲಿ ಮತ್ತೆ ದಲಿತ ಸಿಎಂ ಕೂಗು ವಿಚಾರ, ಸಿದ್ದರಾಮಯ್ಯ ಕೆಳಗೆ ಇಳಿಸಲು ಕಾಂಗ್ರೆಸ್ ನಲ್ಲೇ 8ರಿಂದ 10ಜನರು ರೇಸ್ ನಲ್ಲಿ ಇದ್ದಾರೆ ಅನಿವಾರ್ಯವಾಗಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪರಿಸ್ಥಿತಿ ಬಂದೇ ಬರುತ್ತೆ
ಅದು ಆಗಬಾರದೆಂದರೆ ಸಿದ್ದರಾಮಯ್ಯ ಗೌರವಯುತವಾಗಿ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಇಳಿಸಬೇಕು ಅನೋದು ಆರಂಭವಾಗಿದೆ, ತಮಗೇ ಬೇಕಾದವರನ್ನ ಸಿಎಂ ಮಾಡಿ ಸಿದ್ದರಾಮಯ್ಯ ಕೆಳಗಿಳಿಯಲಿ ಎಂದ ಶೆಟ್ಟರ್
ಟೈಮಿಂಗ್ ನೋಡ್ತಿದ್ದಾರೆ, ಅವರ ಫೇವರ ಬಂದಿದ್ರೆ ಇನ್ನೂ ಸ್ವಲ್ಪ ಮುಂದಕ್ಕೆ ಹೋಗಬಹುದು ಒಟ್ಟಾರೆ ಸಿದ್ದರಾಮಯ್ಯ ಇಳಿಯೋದ 100ರಷ್ಟು ನಿಶ್ಚಿತ ಎಂದರು.