ಬಡವರ ಅನ್ನ ಕಸಿದುಕೊಂಡ ಮುನಿಯಪ್ಪನವರ ಇಲಾಖೆ
- shivaraj B
- 11 Sep 2024 , 9:17 AM
- Bailhongal
- 319
ಬೈಲಹೊಂಗಲ : ಮನ್ಯಾಗ ಕಾರ ಇದ್ದಾವ್ರಿಗೆ, ಫ್ಯಾನ್ ಇದ್ದಾವ್ರಿಗೆ ಬಿಪಿಎಲ್ ರೇಷನ ಕಾರ್ಡ ರದ್ದು ಮಾಡುತ್ತಿರುವ ಮುನಿಯಪ್ಪನ ಆಹಾರ ಇಲಾಖೆಯ ವಿರುದ್ದ ರಾಜ್ಯದ ಜನತೆ ಧಂಗೆ ಏಳುವ ಕಾಲ ಹತ್ತಿರದಲ್ಲಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆಬಂದಾಗಿನಿಂದ ಒಂದಿಲ್ಲೊಂದು ಹೊಸ ಕಾಯ್ದೆ ಜಾರಿಗೆ ತರುತ್ತಿದ್ದು, ಬಿಟ್ಟಿ ಭಾಗ್ಯಗಳ ಪೂರೈಕೆಗಾಗಿ ಬಡವರ ಅನ್ನಕ್ಕೂ ಕಣ್ಣ ಹಾಕಿದೆ.
ಕೇಂದ್ರದಲ್ಲಿ ಇವರದೆ ಪಕ್ಷದ ಆಡಳಿತ ಇರುವಾಗ ಗರೀಭಿ ಹಠಾವೋ ಯೋಜನೆ ಘೋಷಣೆ ಮಾಡಲಾಗಿತ್ತು. ದೇಶದ ಬಡ ಜನರು ಹೊಟ್ಟೆ ತುಂಬ ಊಟ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತಂದಿದ್ದರೂ ಸಹ ಅನುಷ್ಠಾನಕ್ಕೆ ತರದೇ ಕೇವಲ ಘೋಷಣೆಯಾಗಿ ಮಾತ್ರ ಉಳಿದಿತ್ತು.
ಈಗ ಕೇಂದ್ರದ ನರೇಂದ್ರ ಮೋದಿ ಸರ್ಕಾರ ದೇಶದ ಬಡವರ ಹೊಟ್ಟೆ ತುಂಬಿಸುವ ಅನ್ನ ಭಾಗ್ಯಕ್ಕೂ ಕಲ್ಲು ಹಾಕಲು ಹೊರಟಿದೆ ರಾಜ್ಯ ಸರ್ಕಾರ.
ಉಚಿತ ಭರವಸೆಯ ಈಡೇರಿಕೆಗಾಗಿ ಖಚಿತ ಯೋಜನೆಗಳನ್ನು ಮೊಟಕು ಗೊಳಿಸುತ್ತಿರುವ ಕಾರ್ಯ ಎಷ್ಡರ ಮಟ್ಟಿಗೆ ಸರಿ ಎಂದು ಸಾರ್ವಜನಿಕ ವಲಯದಲ್ಲಿ ಮೂಡುತ್ತಿರುವ ಪ್ರಶ್ನೆಯಾಗಿದೆ.
ವರದಿ : ರವಿಕಿರಣ್ ಯಾತಗೇರಿ