ನಾಗರಮುನೊಳ್ಳಿ ಗ್ರಾಮದ ಶ್ರೀ ಸಿದೇಶ್ವರ ಜಾತ್ರಾ ಮಹೋತ್ಸವಕ ಇಂದಿನಿಂದ ಪ್ರಾರಂಭ
ಬೆಳಗಾವಿ ಜಿಲೆಯ ಚಿಕ್ಕೋಡಿ ತಾಲೂಕಿನ ನಾಗರಮುನೋಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಶ್ರೀ ಸಿದ್ದೇಶ್ವರ ಜಾತ್ರೆಯು ಬುಧವಾರ 30/10/2024 ರಿಂದ ರವಿವಾರ ದಿನಾಂಕ 03/10/2024 ರ ವರೆಗೆ ವಿಜೃಂಭಣೆಯಿಂದ ಜರಗುವುದು.
ಮುಖ್ಯವಾಗಿ ಬುಧವಾರ ರಂದು ಶ್ರೀ ಬ್ರಹ್ಮದೇವರ ಹಬ್ಬ ಅದೇ ರೀತಿಯಾಗಿ ಗುರುವಾರ ರಂದು ಶ್ರೀ ನರಕ ಚತುರ್ದಶಿಯಂದು ಊರಲಿ ಪಲ್ಲಕಿ ಉತ್ಸವ ಜರಗುವುದು ಮತ್ತು
ಶುಕ್ರವಾರ ರಂದು ದೀಪಾವಳಿ ಅಮಾವಾಸ್ಯ ರಾತ್ರಿ 9 ಗಂಟೆಗೆ ಯೋಥ ಅಶೋಶಿಯೆಷನ ವತಿಯಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ನಡೆಯುವುದು.
ಶನಿವಾರ ರಂದು ಬಲಿಪಾಡ್ಯ, ಹಾಗೂ ಸಾಯಂಕಾಲ ಕಬ್ಬುರ ಸಿದ್ದೇಶ್ವರ ಪಲ್ಲಕಿ ಭೇಟೆ, ಮತ್ತು ಕಾಯಿ ಹಾರಿಸಿವ ದೃಷ್ಯ ಕೂಡಾ ನೋಡಬಹುದು.
ಅದೇ ರೀತಿ ಬಲಿ ಪ್ರತಿಪದ ಶರತಿನ ಕಾರ್ಯಕ್ರಮಗಳು ಕೂಡಾ ಮುಂಜಾನೆ 9 ಗಂಟೆಗೆ ಪ್ರಾರಂಭವಾಗುದು
ಅದರಲ್ಲಿ ಕುದುರೆಗಾಡಿ ಶರತು, ಸಾಯಕಲ ಶರತು
ಒಡುವ ಶರತು ಕುದುರೆ ಶರತು ಟಗರಿನ ಕಾಳಗ 2 ಹಲಿನ ಟಗರು , ಟಗರಿನ ಕಾಳಗ 4 ಹಲಿನ ಟಗರು, ಅದೇ ರೀತಿಯಾಗಿ 6 ಹಲಿನ ಟಗರಿನ ಕಾಳಗ ಕೂಡಾ ಇಲ್ಲಿ ನೋಡಬಹುದು ಮತ್ತು ಬಹುಮಾನ ಕೂಡಾ ಇರುವುದು.
ಸಂಜೆ 7 ಗಂಟೆಗೆ ಮಲಕಂಬ ಏರುವ ಸ್ಪರ್ಧೆ, 8 ಗಂಟೆಗೆ ಗುಂಡು ಏತುವ ಸ್ಪರ್ಧೆ ಹಾಗೂ 9 ಗಂಟೆಗೆ ಚಿಲ ಏತುವ ಕಸರತು ಕೂಡಾ ಇಲ್ಲಿ ನೋಡಬಹುದು.
ಮತ್ತು ರಾತ್ರಿ ವೇಳೆ 11 ಗಂಟೆಗೆ ಶ್ರೀ ಗುರು ಮಲ್ಲಿಕಾರ್ಜುನ ನಾಟ್ಯ ಸಂಘ ವತಿಯಿಂದ ಬಹದೂರ ಹುಲಿ ಎಂಬ ಸುಂದರ ಸಾಮಾಜಿಕ ನಾಟ್ಯ ಇರುವುದು.
ಮತ್ತು ಎಲ್ಲಾ ಭಕ್ತಾದಿಗಳಿಗೆ ಮಹಾಪ್ರಸಾದ ಕೂಡಾ ಇಲ್ಲಿ ಇರುತ್ತದೆ.
ರವಿವಾರ ದಿನಾಂಕ 3 ರಂದು ಮದ್ಯಾಹ್ನ 2 ಗಂಟೆಗೆ ಜಂಗಿ ನಿಕಾಲಿ ಕುಸ್ತಿಗಳು ನಡೆಯುವುದು.ಅದೇ ರೀತಿ ರಾತ್ರಿ 8 ರಿಂದ 10 ಗಂಟೆಯವರೆಗೆ ಶ್ರೀ ಸೀದಾರೂಡ ಆನಂದೇಶ್ವರ ಭಜನಾ ಮಂಡಳಿ ಬೆಳಗಲಿ ಇವರಿಂದ ಭಜನಾ ಕಾರ್ಯಕ್ರಮ ಮತ್ತು ರಾತ್ರಿ ಶಾಹಿಗಾನಾ ಕೂಡಾ ಇರುವುದು.ಮುಖ್ಯವಾಗಿ ಮಹಿಳಾ ಜಂಗಿ ನಿಕಾಲಿ ಕುಸ್ತಿ ಕೂಡಾ ಇಲ್ಲಿ ಇರುವುದು ಹಿಗೆ ಈ ಜಾತ್ರೆಯು ಅತೀ ವಿಜೃಂಭಣೆಯಿಂದ ನಡೆಯುವುದು.
ಸಿದಪ್ಪ ಮರೆಯಾಯಿ ಹಾಗೂ ವಿರುಪಾಕ್ಷಿ ಬಾಳಪಾ ಈಟ್ಟಿ ಹಾಗೂ ಎಸ್ ಬಿ ಮನಗೋಳಿ ಯವರು ಮಾಧ್ಯಮಗಳೊಂದಿಗೆ ಮಾತನಾಡಿ ಶ್ರೀ ಸಿದೇಶ್ವರ ದೇವಸ್ಥಾನದ ಚರಿತ್ರೆ ಹಾಗೂ ಇಲಿರುವ ವಿಶೇಷತೆ ಮತ್ತು ಜಾತ್ರೆ ನಿಮಿತ್ಯ ಆಯೋಜಿಸಲಾದ ಕಾರ್ಯಕ್ರಮಗಳ ಕುರಿತು ಮತ್ತು ಪ್ರತಿ ವರ್ಷದಂತೆ ಈ ವರ್ಷ ಜಾತ್ರಾ ಕಮಿಟಿ ಮಾಡಿರುವ ವೆವಸ್ಥೆಗಳ ಕುರಿತು ತಿಳಿಸಿದರು.
ಈ ವೇಳೆ ಮಾರುತಿ ಭೀಮ್ಮಪ್ಪಾ ಮರೆಯಾಯಿ ಸಿದೇಶ್ವರ ದೇವಸ್ಥಾನ ಕಮಿಟ್ಟಿ ವೆವಸ್ಥಾಪಕರು,ಸಿದ್ದೇಶ್ವರ ಸೇವಾ ಕಮಿಟ್ಟಿ ಅದೇಕ್ಷರು ಎಸ್ ಎಸ್ ಮರೆಯಾಯಿ,ಶ್ರೀ ಸಿದ್ದೇಶ್ವರ ಸೇವಾ ಕಮಿಟ್ಟಿ ಕಾರ್ಯದರ್ಶಿಗಳು ಎಸ್ ಬಿ ಮನಗೋಳಿ,
ವಕೀಲರು ಹಾಗೂ ಕೆ ಎಮ್ ಎಫ್ ನಿರ್ದೇಶಕರು ಬೆಳಗಾವಿ ವಿರುಪಾಕ್ಷಿ ಬಾಳಪಾ ಈಟ್ಟಿ ,ಮಾಜಿ ಗ್ರಾಮ ನಾಗರಮುನಳಿ ಸದಸ್ಯರು ಬಿ ಎಸ್ ಯಾದಗೂಡೆ ,ಬಸವನಿ ರಾಮಪಾ ಕುಂಬಾರ,ಮಹದೇವ್ ಇರಪ್ಪಾ ಚೌಗಲಾ,ಡಾ ಅರುಣ ಸಿದಪ್ಪಾ ಮರೆಯಾಯಿ,ನಿಜಾಮ ಲಾಲಕಾನ ಪೆಂಡಾರಿ , ಶ್ರೀಸಿದ್ದೇಶ್ವರ ಸೇವಾ ಕಮಿಟಿ ಹಾಗು ಸಿದ್ದೇಶ್ವರ ಜಾತ್ರಾ ಕುಸ್ತಿ ವೇವಸ್ಥಾಪಕ ಕಮಿಟ್ಟಿಯ ಸದಸ್ಯರು ಉಪಸ್ಥಿತರಿದ್ದರು.