ಹಿಂಡಲಗಾ ಜೈಲಿನಲ್ಲಿ ಸಿಬ್ಬಂದಿಗಳಿಗೆ ಇಲ್ಲ ರಕ್ಷಣೆ

ಬೆಳಗಾವಿ : ಇಲ್ಲಿನ ಹಿಂಡಲಗಾ ಜೈಲಿನ ಸಿಬ್ಬಂದಿಗೆ ರಕ್ಷಣೆ ಇಲ್ಲದಂತಾಗಿ ಜೀವ ಭಯದಲ್ಲಿ ಕೆಲಸ ಮಾಡುವಂತಾಗಿದೆ. 

promotions

ಜೈಲಿನ ನಿಯಮ ಪಾಲನೆ ಮಾಡು ಅಂದಿದ್ದಕ್ಕೆ ಕೈದಿಗಳಿಂದ ಗುಂಡಾಗಿರಿ ನಡೆದಿದೆ.  

promotions

ಕೆಲ ದಿನಗಳಿಂದ ನಾಲ್ಕೈದು ಬಾರಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಕೈದಿಗಳು ಅವರ ಕರ್ತವ್ಯಕ್ಕೆ ರಕ್ಷಣೆ ಇಲ್ಲದಂತಾಗಿದೆ. 

promotions

ಹಿಂಡಲಗಾ ಜೈಲಿನ ವಾರ್ಡನ್ ವಿನೋದ್ ಲೋಕಾಪುರ್ ಮೇಲೆ ಹಲ್ಲೆ ಮಾಡಲಾಗಿದ್ದು ಹಾಸನದಿಂದ ಗಡಿಪಾರು ಆಗಿ ಬೆಳಗಾವಿಯ ಹಿಂಡಲಗಾ ಜೈಲಿನ ಕೈದಿಯಾಗಿರುವ ರಾಹಿಲ್ ಅಲಿಯಾಸ್ ರೋಹನ ಎಂಬ ಕೈದಿ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ವಿನೋದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ಘಟನೆ ಬೆಳಕಿಗೆ ಬಂದಿದೆ. 

ಅತೀ ಭದ್ರತೆ ವಿಭಾಗದಲ್ಲಿದ್ದ ಕೈದಿ ರೋಹನ್.

ಆಸ್ಪತ್ರೆಗೆ ಹೋಗಲು ಸ್ಥಳೀಯ ಸಿಬ್ಬಂದಿ ಅನುಮತಿ ಬೇಕಾಗುತ್ತೆ.

ತಡವಾಗಿ ಅನುಮತಿ ನೀಡಿದ್ರೂ ಅನ್ನೋ ಕಾರಣಕ್ಕೆ ಹೊರ ಬಂದು ವಿನೋದ್ ಮೇಲೆ 

ಕಾಲಿನಿಂದ ಒದ್ದು ಕೈಯಿಂದ ಹಿಗ್ಗಾಮಗ್ಗಾ ಹೊಡೆದು ಹಲ್ಲೆ ಮಾಡಿದ್ದಾನೆ. ಇದರಿಂದ 

ತೀವ್ರವಾಗಿ ಗಾಯಗೊಂಡ ವಿನೋದ್ ಗೆ ಸದ್ಯ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದ್ದು 

ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಕೂಡಾ ಯಾವುದೇ ಕ್ರಮಕ್ಕೆ ಮುಂದಾಗದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ. 

ಇನ್ನೂ ಕೈದಿಗಳ ಗೂಂಡಾಗಿರಿಗೆ ಬೇಸತ್ತು ಕೆಲಸಕ್ಕೆ ಬರಲು ಭಯದ ವಾತಾವರಣದಲ್ಲಿ ಕೆಲಸ ಮಾಡುವ ಸ್ಥಿತಿ ಇಲ್ಲಿನ ಸಿಬ್ಬಂದಿಯದ್ದು.

ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ವಿನೋದ ಹಿಂದೆಯೂ ಕೂಡಾ ಸಿಬ್ಬಂದಿಗಳ ಮೇಲೆ‌ ಹಲ್ಲೆಯಾಗಿದೆ ಆದರೆ ಕ್ರಮ ಆಗಿಲ್ಲ‌ ಎಂದರು. ಅಲ್ಲದೆ 

ಮೇಲಾಧಿಕಾರಿಗಳು ಈ ಕುರಿತು ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಹಲ್ಲೆಗೊಳಗಾದ ವಿನೋದ್ ಮನವಿ ಮಾಡಿದ್ದಾರೆ.

Read More Articles