ಗಣಪತಿ ವಿಸರ್ಜನಾ ಸ್ಥಳಕ್ಕೆ ಅಧಿಕಾರಿಗಳ ದಂಡು ! ಪರಿಶೀಲನೆ ನಡೆಸಿದ ಡಿಸಿ

ಬೆಳಗಾವಿ :  ಗಣೇಶ ಹಬ್ಬದ ಪ್ರಯುಕ್ತ ಬೆಳಗಾವಿ ನಗರದ ಪ್ರಮುಖ ಗಣೇಶಮೂರ್ತಿ ವಿಸರ್ಜನಾ ಸ್ಥಳ ಕಪಿಲೇಶ್ವರ ಹೊಂಡಕ್ಕೆ ಇಂದು ಡಿಸಿ ಮಹಮ್ಮದ ರೋಷನ್‌ ಬೇಟಿ ನೀಡಿ ಪರಿಶೀಲನೆ ನಡೆಸಿದರು.

promotions

ಪೊಲೀಸ್‌ ಇಲಾಖೆ ಹಾಗೂ ಬೇರೆ ಇಲಾಖೆಯ  ಅಧಿಕಾರಿಗಳೊಂದಿಗೆ ಸ್ಥಳ  ಪರಿಶೀಲಿಸಿ, ಮಾಧ್ಯಮದ ಜೊತೆ ಮಾತನಾಡಿ, ಗಣಪತಿ ವಿಸರ್ಜನೆಗೆ  ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಸಾರ್ವಜನಿಕರುತಾವು ಪ್ರತಿಷ್ಟಾಪನೆ ಮಾಡಿದ ಗಣಪತಿ ಮೂರ್ತಿಗಳನ್ನು ಕಪಿಲೇಶ್ವರ ದೇವಸ್ಥಾನದ ಬಳಿ ನಿರ್ಮಿಸಿರುವ ಹೊಂಡದಲ್ಲಿ ವಿಸರ್ಜನೆ ಮಾಡಬೇಕು. ಹೊಂಡದ ಸುತ್ತಲೂ ಸ್ವಚ್ಚತೆ ಕಾಪಾಡಬೇಕು ಎಂದರು. 

promotions

ಗಣಪತಿ ವಿಸರ್ಜನೆಗೆ ಯಾವುದೇ ಅಡೆತಡೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಜರುಗಿಸಲಾಗಿದ್ದು ಈ ಕುರಿತು ಎಲ್ಲ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.

ಸ್ಥಳದಲ್ಲಿ ಹಿರಿಯ ಅಧಿಕಾರಿಗಳು ಇದ್ದರು.

Read More Articles