ಪೊಲೀಸ್ ದಾಳಿ: 1.21 ಕೋಟಿ ಮೌಲ್ಯದ ಗಾಂಜಾ ವಶ, 11 ಮಂದಿ ಬಂಧನ

ಬೆಂಗಳೂರು: ಪೊಲೀಸರು ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿ 11 ಮಂದಿಯನ್ನು ಬಂಧಿಸಿ 1.21 ಕೋಟಿ ಬೆಲೆಬಾಳುವ 190 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. 
ಯಲಹಂಕ: ಆಂಧ್ರಪ್ರದೇಶದಿAದ ಕಡಿಮ ಬೆಲೆಗೆ ಮಾದಕವಸ್ತು ಗಾಂಜಾವನ್ನು ಖರೀದಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿ 74.53 ಲಕ್ಷರೂ. ಮೌಲ್ಯದ 93ಕೆ.ಜಿ.ಗಾಂಜಾ, ಟ್ರಕ್, ಕಾರು ಮತ್ತು ನಾಲ್ಕು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

promotions


ಅಶೋಕ್‌ನಗರ: ಬನ್ನೇರುಘಟ್ಟದಿಂದ ಹೊಸೂರು ಕಡೆಗೆ ಹೋಗುವ ರಸ್ತೆಯಲ್ಲಿರುವ ಕ್ರಿಶ್ಚಿಯನ್ ಸ್ಮಶಾನದ ಮುಂಭಾಗವಿರುವ ಸಾರ್ವಜನಿಕ ರಸ್ತೆಯಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು ಬೊಲೇರೋ ಪಿಕ್‌ಅಪ್ ವಾಹನಲ್ಲಿ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿರುವ ಮಾಹಿತಿ ಲಭಿಸಿದೆ. ಕೂಡಲೇ ಅಶೋಕನಗರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿAದ 30.68 ಲಕ್ಷರೂ. ಮೌಲ್ಯದ 76 ಕೆ.ಜಿ 700 ಗ್ರಾಂ ಗಾಂಜಾ, 1 ಬೊಲೇರೋ ಪಿಕ್‌ಅಪ್ ವಾಹನ, 3 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಬಾಣಸವಾಡಿ: ನಿಷೇಧಿತ ಮಾದಕವಸ್ತು ಗಾಂಜಾ ಮಾರಾಟ ಮತ್ತು ಖರೀದಿಸಲು ಯತ್ನಿಸಿದ ಮೂವರನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿ 15 ಲಕ್ಷ ಮೌಲ್ಯದ 15 ಕೆ.ಜಿ 120 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಕನಕದಾಸ ಲೇಔಟ್ ಕೆ.ಎಚ್.ಬಿ ಕ್ವಾಟ್ರಸ್, ಆರ್.ಎಸ್ ಪಾಳ್ಯದ ಮನೆಯೊಂದರಲ್ಲಿ ಇಬ್ಬರು ವ್ಯಕ್ತಿಗಳನ್ನು ಗಾಂಜಾ ಮಾರಾಟ ಮಾಡುವ ಇಟ್ಟುಕೊಂಡಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ.

promotions


ಅಮೃತಹಳ್ಳಿ: ಚಿರಂಜೀವಿ ಲೇಔಟ್‌ನ ವಿಕ್ಟೋರಿಯ ಚರ್ಚ್ ಬಳಿ ಇರುವ ಖಾಲಿ ಜಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ 1.5 ಲಕ್ಷ ಮೌಲ್ಯದ 5 ಕೆ.ಜಿ 170 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಿಹಾರ ಮತ್ತು ಒಡಿಸ್ಸಾ ರಾಜ್ಯದಿಂದ ಕಡಿಮೆ ಬೆಲೆಗೆ ಗಾಂಜಾ ತಂದು ಹೆಚ್ಚಿನ ಬೆಲೆಗೆ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ.

Read More Articles