
ರಾಹುಲ್ ಗಾಂಧಿ ಕ್ಷಮೆ ಕೇಳಬೇಕು : ಸಿದ್ದರಾಮೇಶ ಹಳ್ಳಿ
- shivaraj B
- 18 Jul 2024 , 7:32 PM
- Koppal
- 6787
ಕೊಪ್ಪಳ : ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿಯವರು ಅಗ್ನಿಪಥ್ ಯೋಜನೆಯ ಬಗ್ಗೆ ಹಗುರವಾಗಿ ಮಾತನಾಡಿದ್ದು, ದೇಶದ ಸೈನಿಕರಿಗೆ ಮಾಡಿದ ಅಪಮಾನವಾಗಿದೆ ಅವರು ಯುವಜನತೆಯ ಕ್ಷಮೆಯಾಚಿಸಬೇಕೆಂದು ಜಿಲ್ಲಾ ಬಿಜೆಪಿ ಪೂರ್ವ ಸೈನಿಕರ ಪ್ರಕೋಷ್ಠದ ಸಂಚಾಲಕ ಹಾಗೂ ರಾಜ್ಯ ಪೂರ್ವ ಸೈನಿಕರ ಪ್ರಕೋಷ್ಠದ ಸದಸ್ಯ ಭೀಮನಗೌಡ ಜಾಲಿಹಾಳ್ ಹೇಳಿದರು.

ಅವರು ಗುರುವಾರದಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಗ್ನಿಪಥ್ ಯೋಜನೆಯು ದೇಶವನ್ನು ಕಾಪಾಡಿ, ಭಾರತದ ಸೈನ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಪರಮೋಚ್ಚ ಅಧಿಕಾರ ಪಡೆದಿರುವಾಗ, ರಾಹುಲ್ ಗಾಂಧಿ ಈ ಯೋಜನೆಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತೀಯ ಸೈನ್ಯಕ್ಕೆ ಬಲ ತುಂಬುತ್ತಿದ್ದಾರೆ. ಸೈನಿಕರಿಗೆ ಎಲ್ಲಾ ಸೌಕರ್ಯಗಳನ್ನು ಒದಗಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿಯೇ ಯುವ ಸೈನಿಕರು ಹೆಚ್ಚಾಗಬೇಕು ಎಂಬ ಮಹಾದಾಸೆಯ ಯೋಜನೆಯನ್ನು ಜಾರಿಗೆ ತಂದಿದ್ದು. ಈಗಾಗಲೇ 80 ಸಾವಿರ ಯುವಕರು ಈ ಯೋಜನೆಯ ಅಡಿಯಲ್ಲಿ ದೇಶ ಸೇವೆ ಸಲ್ಲಿಸುತ್ತಿದ್ದಾರೆ. ಈ ವರ್ಷದ ಅಂತ್ಯದೊಳಗೆ ಅಗ್ನಿಪಥ ಯೋಜನೆಯಡಿಯಲ್ಲಿ ಸುಮಾರು 1.75 ಲಕ್ಷ ಸೈನಿಕರ ನೇಮಕಾತಿ ಆಗಬಹುದು ಎಂದರು.
ಇದೊಂದು ದೇಶದ ಸೇವೆಗೆ ಜೊತೆಗೆ ಯುವಕರಲ್ಲಿ ಆರ್ಥಿಕ ಬಲವನ್ನು ತುಂಬುವ ಮಹತ್ವದ ಯೋಜನೆಯಾಗಿದೆ ಸೈನ್ಯಕ್ಕೆ ಸೇರುವ ವಯಸ್ಸನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಇದುವರೆಗೂ 32 ವರ್ಷ ವಯಸ್ಸಿತ್ತು. ಆದರೆ ಈಗ ಇದನ್ನು 28 ವರ್ಷಕ್ಕೆ ಇಳಿಸಲಾಗಿದೆ. ಒಂದು ಯುವ ಸೇನೆ ಪಡೆಯೇ ಇದರಿಂದ ತಯಾರಾಗುತ್ತದೆ, ಇಂತಹ ಬಹುದೊಡ್ಡ ಮಹತ್ವದ ಯುವಕರಿಗೆ ಆಸರೆಯಾಗಿರುವ ದೇಶದ ಪ್ರೇಮ ಬೆಳೆಸುವ ಯೋಜನೆಯನ್ನು ಕಾಂಗ್ರೆಸ್ ಮುಖಂಡರು ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಆರೋಪಿಸಿದರು
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಾಧ್ಯಮ ವಕ್ತಾರ ಸೋಮಶೇಖರಗೌಡ,ಮಂಜುನಾಥ್ ನಾಡಗೌಡರ, ವಕ್ತಾರರಾದ ಮಹೇಶ್ ಹಾದಿಮನಿ ಉಪಸ್ಥಿತರಿದ್ದರು.
ವರದಿ : ರವಿಚಂದ್ರ ಬಿ ಬಡಿಗೇರ