ರೇಣುಕಾಸ್ವಾಮಿ ಕೊಲೆ ಆರೋಪಿ ಪ್ರದೂಶ್ ಬೆಳಗಾವಿಯ ಹಿಂಡಲಗಾ ಜೈಲಿಗೆ ಇಂದು ಶಿಫ್ಟ್

ಬೆಳಗಾವಿ : ಪರಪ್ಪನ ಅಗ್ರಹಾರದಲ್ಲಿ ಐಶಾರಾಮಿ ಸವಲತ್ತು ಪಡೆದಿದ್ದ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ ಮತ್ತು ಅವನ ಗ್ಯಾಂಗ್ ನಲ್ಲಿದ್ದ ಆರೋಪಿ ಪ್ರದೂಶ್ ಬುಧವಾರ ರಾತ್ರಿಯೇ ಬೆಳಗಾವಿ ಹಿಂಡಲಗಾ ಕಾರಾಗ್ರಹಕ್ಕೆ ಬರಲಿದ್ದಾನೆ.

promotions

ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ, ಆರೋಪಿ ದರ್ಶನ ಪರಪ್ಪನ ಅಗ್ರಹಾರದಲ್ಲಿ ಐಶಾರಾಮಿ ಸವಲತ್ತುಗಳನ್ನು ಪಡೆದಿದ್ದ ಹಿನ್ನೆಲೆಯಲ್ಲಿ ಈಗ ರಾಜ್ಯದಲ್ಲರುವ ಪ್ರಮುಖ ಕಾರಾಗೃಹಕ್ಕೆ ಆರೋಪಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.

promotions

ಎ- 2 ಆರೋಪಿ ದರ್ಶನ ಬಳ್ಳಾರಿ, ಬೆಳಗಾವಿ ಹಿಂಡಲಗಾ ಜೈಲಿಗೆ ಪ್ರದೂಶ್, ಮೈಸೂರು ಜೈಲಿಗೆ ನಂದೀಶ್, ರಾಘವೇಂದ್ರ, ಪವನ, ವಿಜಯಪುರ ಜೈಲಿಗೆ ವಿನಯ್, ಧಾರವಾಡ ಜೈಲಿಗೆ ಧನರಾಜ ಸೇರಿದಂತೆ ವಿವಿಧ ಕಾರಾಗೃಹಕ್ಕೆ ಕೊಲೆ ಆರೋಪಿಗಳನ್ನು ಸ್ಥಳಾಂತರ ಮಾಡಲಿದ್ದಾರೆ. ಅದರಂತೆ ಪ್ರದೂಶ್ ನನ್ನು ಬೆಳಗಾವಿಯ ಹಿಂಡಲಗಾ ಕಾರಾಗೃಹಕ್ಕೆ ಇಂದು ರಾತ್ರಿ ಪೊಲೀಸರು ಕರೆ ತರಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

promotions

Read More Articles