ಸಿದ್ದಿವಿನಾಯಕ, ಶಿವಲಿಂಗ ಮತ್ತು ನಂದಿ ಮೂರ್ತಿಯ ಅದ್ದೂರಿ ಮೂರ್ತಿ ಮೆರವಣಿಗೆ ನಡೆಸಿದ ಮಾರುತಿನಗರ ನಿವಾಸಿಗಳು
- Krishna Shinde
- 15 Jan 2024 , 2:26 AM
- Belagavi
- 291
ಬೆಳಗಾವಿ :ಮಾರುತಿ ನಗರದ ಶ್ರೀ ಸಿದ್ಧಿವಿನಾಯಕ ಅಭಿವೃದ್ಧಿ ಸೇವಾ ಸಂಘದವತಿಯಿಂದ ಶ್ರೀ ಸಿದ್ದಿವಿನಾಯಕ, ಶಿವಲಿಂಗ ಮತ್ತು ನಂದಿ ಮೂರ್ತಿಯ ಅದ್ದೂರಿ ಮೆರವಣಿಗೆ ನಡೆಸಿದ್ದಾರೆ.
ಶುಕ್ರವಾರ, ದಿ. 19-5-2023 ರಂದು ಬೆಳಿಗ್ಗೆ 9-00 ಗಂಟೆಯಿಂದ ಎಲ್ಲ ಮೂರ್ತಿಗಳ ಅಭಿಷೇಕ ಕಾರ್ಯಕ್ರಮ ನಡೆಯಲಿದೆ.
ಶನಿವಾರ, ದಿ. 20-5-2023 ರಂದು ಬೆಳಿಗ್ಗೆ 9-30 ಗಂಟೆಯಿಂದ ಅಕ್ಕಿ ಹಾಗೂ ಹೂವುಗಳಿಂದ ಅಭಿಷೇಕ ಕಾರ್ಯಕ್ರಮ.
ರವಿವಾರ, ದಿ. 21-5-2023 ರಂದು ಶ್ರೀ ಶಾಲಿವಾಹನ ಶಕೆ 1945 ನೇ ಶುಭಕೃತನಾಮ ಸಂವತ್ಸರ ಶುಕ್ಲ ಪಕ್ಷ ದ್ವಿತೀಯಾ ತಿಥಿ ಉತ್ತರಾಯಣ ರವಿವಾರ ದಿನಾಂಕ 21-5-2023 ರಂದು ಬ್ರಾಹ್ಮೀ ಮುಹೂರ್ತದಲ್ಲಿ ನೂತನ ದೇವಸ್ಥಾನದ ವಾಸ್ತುಶಾಂತಿ ಪೂಜೆ ಬೆಳಿಗ್ಗೆ 9-00 ಗಂಟೆಗೆ ನಂತರ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ಸಮಾರಂಭ, ಬೆಳಿಗ್ಗೆ 11-00 ಗಂಟೆಗೆ ಕಳಸಾರೋಹಣ ನಂತರ ಮಧ್ಯಾಹ್ನ 1-00 ರಿಂದ 4-00 ವರೆಗೆ ಮಹಾಪ್ರಸಾದ ಇರುತ್ತದೆ.
ಮಂದಿರಕ್ಕೆ ದೇಣಿಗೆ ನೀಡಬಯಸುವವರು ಮಂದಿರಕ್ಕೆ ಬಂದು ನೀಡಬಹುದುಅಥವಾ ಈ ಕಳಗಿನ ಮೊಬೈಲ್ ನಂಬರ್ ನ್ನು ಸಂಪರ್ಕಿಸಬಹುದು. 9591429218 ಅಥವಾ 7325827001 ಅಥವಾ 9845818974 ಕರೆ ಮಾಡಲು ತಿಳಿಸಿದ್ದಾರೆ.