ಯತ್ನಾಳ ಗೆ ಟಾಂಗ್ ಕೊಟ್ಟ ಸಂತೋಷ ಲಾಡ್.

localview news

ಬೆಳಗಾವಿ :

ಬಿಜೆಪಿ ಬಸವನಗೌಡ ಪಾಟೀಲ ಯತ್ನಾಳ್ ಮೇಲೆ ಗೌರವವಿದೆ. ಮಾಧ್ಯಮದಲ್ಲಿ ಪ್ರಚಾರ ಸಿಗುತ್ತದೆ ಎಂದು ಮುಖ್ಯಮಂತ್ರಿಗಳ ಮೇಲೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ವಾಗ್ದಾಳಿ ನಡೆಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ ಅವರು ಹಿರಿಯರು, ಯಾರ ಬಗ್ಗೆ ಮಾತಾಡುತ್ತಿದ್ದಾರೆ ಎನ್ನುವುದು ಬೇಕಲ್ಲ.ರಾಜ್ಯದ ಸಿಎಂ ಬಗ್ಗೆ ಅವರು ಮಾತಾಡುತ್ತಿದ್ದಾರೆ. ಏನಾದರೂ ಹಿಡಿತ ಬೇಕಲ್ಲ. ಮಾಧ್ಯಮದಲ್ಲಿ ಪ್ರಚಾರ ಸಿಗುತ್ತದೆ ಎಂದು ಮಾತಾಡುವುದು, ನೇರವಾಗಿ ಈ ರೀತಿ ಆರೋಪ ಮಾಡಿದ್ದರೆ ಅವರಿಗೆ ಏನು ಸಿಗುತ್ತದೆ‌. ಸ್ವಲ್ಪ ನೈತಿಕತೆ ಇಟ್ಟುಕೊಳ್ಳಿ. ಇಲ್ಲವಾದರೆ ಸುಮ್ಮನೆ ಮಾತಾಡುತ್ತೇನೆ ಎಂದಾದರೆ ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದರು.

ಯಾರೋ ವ್ಯಕ್ತಿ ಹೋದರೆ, ಸಿಎಂಗೆ ಯಾಕೆ ಲಿಂಕ್ ಮಾಡುತ್ತಾರೆ. ಅವರ ಬಳಿ ಮಾಹಿತಿ ಕೊಡಲಿ, ಕೇಂದ್ರದಲ್ಲಿ ಅವರದ್ದೆ ಸರಕಾರ ಇದೆ ಬೇಕಿದ್ದರೆ ತನಿಖೆ ಮಾಡಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Latest Articles