ಕೃಷ್ಣೆಯ ಮಡಿಲಲ್ಲಿ ಘನತ್ಯಾಜ್ಯ ವಿಲೇವಾರಿ ! ವಿಕೃತಿ ಮೆರೆದ ಪಂಚಾಯತ ಸಿಬ್ಬಂದಿ

ಚಿಕ್ಕೋಡಿ : ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಉಕ್ಕಿಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ದರೂರ ಗ್ರಾಮಪಂಚಾಯತಿ ಸಿಬ್ಬಂದಿ ಕಸ ವಿಲೇವಾರಿ ಮಾಡಿ ವಿಕೃತಿ ಮೆರೆದಿದ್ದಾರೆ. 

promotions

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮ ಪಂಚಾಯತಿಯವರು ದರೂರ- ಹಲ್ಯಾಳ ಸೇತುವೆ ಬಳಿ ಕಸ ವಿಲೇವಾರಿ ಮಾಡಿದ್ದು, ಇದರಿಂದ ಜಲಚರ ಪ್ರಾಣಿಗಳ ಜೀವಕ್ಕೆ ಕುತ್ತು ಬಂದಿದೆ.

promotions

ಒಂದೆಡೆ ಜನತೆ ನದಿಗೆ ಬಾಗಿನ ಅರ್ಪಿಸುತ್ತಿದ್ದರೆ ಮತ್ತೊಂದೆಡೆ ದರೂರ ಪಂಚಾಯತಿಯಿಂದ  ಊರಲ್ಲಿರೋ ಕಸ ತಂದು ಕೃಷ್ಣೆಗೆ ಎಸೆಯುತ್ತಿರುವ ಗ್ರಾಮ ಪಂಚಾಯತಿಯ ಕಾರ್ಯಕ್ಕೆ ಜನರು ಛೀಮಾರಿ ಹಾಕುತ್ತಿದ್ದಾರೆ.

Read More Articles