ಬ್ಯಾಂಕ್ ನೋಟಿನಲ್ಲಿ ಏನಾದರೂ ಬರೆದರೆ ಅದು ಅಮಾನ್ಯವಾಗುತ್ತದೆಯೇ? ವೈರಲ್ ಸೋಷಿಯಲ್ ಮೀಡಿಯಾ ಕ್ಲೈಮ್‌ನ ಫ್ಯಾಕ್ಟ್ ಚೆಕ್
- 5 Jan 2024 , 9:36 PM
- Delhi
- 298
ದೆಹಲಿ :ಇತ್ತೀಚೆಗೆ ಕರೆನ್ಸಿ ನೋಟುಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಹೊಸ ಮಾರ್ಗಸೂಚಿಗಳ ಕುರಿತು ಸ್ಕ್ರಿಬ್ಲಿಂಗ್ ಅನ್ನು ನಿಷೇಧಿಸಲಾಗಿದೆ ಎಂಬ ಸಂದೇಶವು ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ಆ ಸಂದೇಶದ ಪ್ರಕಾರ, ಹೊಸ ನೋಟುಗಳಲ್ಲಿ ಏನನ್ನಾದರೂ ಬರೆಯುವುದು ನೋಟು ಅಮಾನ್ಯವಾಗುತ್ತದೆ ಮತ್ತು ಅದು ಇನ್ನು ಮುಂದೆ ಕಾನೂನು ಟೆಂಡರ್ ಆಗಿರುವುದಿಲ್ಲ ಎಂದು ಹರಿದಾಡುತಿದ್ದ ಸುದ್ದಿಗೆ ಪಿ ಐ ಬಿ ಫ್ಯಾಕ್ಟ್ ಚೆಕ್ ತೆರೆಎಳೆದಿದೆ.

ಸ್ಕ್ರಿಬ್ಲಿಂಗ್ ಹೊಂದಿರುವ ಬ್ಯಾಂಕ್ ನೋಟುಗಳು ಅಮಾನ್ಯವಾಗುವದಿಲ್ಲ ಮತ್ತು ಕಾನೂನುಬದ್ಧವಾಗಿ ಮುಂದುವರಿಯಿರಿ ಎಂದು ತಿಳಿಸಿದೆ.

— PIB Fact Check (@PIBFactCheck) January 8, 2023Does writing anything on the bank note make it invalid❓#PIBFactCheck
✔️ NO, Bank notes with scribbling are not invalid & continue to be legal tender
✔️Under the Clean Note Policy, people are requested not to write on the currency notes as it defaces them & reduces their life pic.twitter.com/V8Lwk9TN8C
ಕ್ಲೀನ್ ನೋಟ್ ನೀತಿಯ ಅಡಿಯಲ್ಲಿ ಜನರು ಕರೆನ್ಸಿ ನೋಟುಗಳನ್ನು ವಿರೂಪಗೊಳಿಸುವುದರಿಂದ ಮತ್ತು ನೋಟಿನ ಮೇಲೆ ಎನಾದರು ಬರೆಯುವುದರಿಂದ ನೋಟಿನ ಗುಣಮಟ್ಟ ಕಡಿಮೆಗೊಳ್ಳುತ್ತದೆ ಎಂದು ತಿಳಿಸಿದೆ.




