ಶ್ರೀ ಮಾತಾ ಗುರುಕುಲ ಪೂರ್ವ ಪ್ರಾಥಮಿಕ ಶಾಲೆ ಆರಂಭ

Listen News

ಬೈಲಹೊಂಗಲ :  ಪಟ್ಟಣದ ಮುರಗೋಡ ರಸ್ತೆಯ ಬಸವನಗರದಲ್ಲಿ ವೇ.ಮೂ.ಡಾ.ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಅವರ ನೇತೃತ್ವದಲ್ಲಿ ಶ್ರೀಮಾತಾ ಗುರುಕುಲ ಪೂರ್ವ ಪ್ರಾಥಮಿಕ ಶಾಲೆ ಆರಂಭಗೊಂಡಿತು. 

Your Image Ad

ಶಾಸಕ ಮಹಾಂತೇಶ ಕೌಜಲಗಿ ಉದ್ಘಾಟಿಸಿ, ಮಾತನಾಡಿ, ಮಹಾಂತೇಶ ಶಾಸ್ತ್ರೀಗಳು ನಾಡಿಗೆ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಹಲವಾರು ಮೈಲಿಗಲ್ಲನ್ನು ಸಾಧಿಸಿ, ಈಗ ಶೈಕ್ಷಣಿಕ ರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವದು ಸಂತಸ ತಂದಿದೆ ಎಂದರು. 

Your Image Ad

ವೇ.ಮೂ.ಡಾ.ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಮಾತನಾಡಿ, ಚಿಕ್ಕಮಕ್ಕಳಿಗೆ ಚಿಕ್ಕಂದಿನಿಂದಲೇ ಗುಣಮಟ್ಡದ ಶಿಕ್ಷಣ ದೊರೆತಲ್ಲಿ ಅವರ ಭವಿಷ್ಯ ಉಜ್ವಲವಾಗುವದು. ಈ ನಿಟ್ಟಿನಲ್ಲಿ ಬೈಲಹೊಂಗಲ ಭಾಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಿಸಿ, ಸುಸಜ್ಜಿತವಾದ ಕಟ್ಟಡದಲ್ಲಿ ಎಂಟು ಕೊಠಡಿಗಳು ಇದ್ದು, ವಿಶಾಲವಾದ ಆಟದ ಮೈದಾನ, ಈಜುಕೊಳ, ಮಕ್ಕಳು ಆಟವಾಡಲು ಮರಳುಕೊಳ,ವಪ್ಲೇ ಹೋಮ್ ಸೇರಿದಂತೆ ಆಟೋಟಗಳು ಇವೆ. ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಎಲ್ ಕೆಜಿ, ಯುಕೆಜಿ ಹಾಗೂ ಪ್ಲೇಹೋಮ ತರಗತಿಗಳು ಇರುತ್ತವೆ. ಪರಿಣತಿ ಹೊಂದಿದ ಶಿಕ್ಷಕ ಬಳಗ ಇದೆ ಎಂದರು. 

ಕಟಕೋಳ ಎಂ. ಚಂದರಗಿಯ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಕುಂದರಗಿಯ ಅಮರಸಿದ್ದೇಶ್ವರ ಸ್ವಾಮಿಜಿ, ಅರಳಿಕಟ್ಟಿ ವಿರಕ್ತಮಠದ ಶಿವಮೂರ್ತಿ ಸ್ವಾಮಿಜಿ ಸಾನಿಧ್ಯ ವಹಿಸಿದ್ದರು. 

ವೇದಿಕೆಯ ಮೇಲೆ ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ, ಸರ್ವೋತ್ತಮ ಜಾರಕಿಹೊಳಿ, ರಾಹುಲ ಜಾರಕಿಹೊಳಿ, ಈಶ್ವರ ಹೋಟಿ, ಮಹಾಂತೇಶ ತುರಮರಿ, ರಾಜು ಜನ್ಮಟ್ಟಿ, ಮಹಾಂತೇಶ ಮತ್ತಿಕೊಪ್ಪ ಇದ್ದರು.

ಮುಖ್ಯೋಪಾಧ್ಯಾಯಿನಿ ಗಿರಿಜಾ ಆರಾದ್ರಿಮಠ ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕರು, ಸಾರ್ವಜನಿಕರು ಇದ್ದರು.

ವರದಿ  : ರವಿಕಿರಣ್  ಯಾತಗೇರಿ 

Read More Articles