ಮಾತು ವಾಪಾಸ್ ತೊಗೊಳ್ಳಿ ;ಸಚಿವ ಸತೀಶಗೆ ಶಿವು ಗುಡ್ಡಾಪುರ ಆಗ್ರಹ
- shivaraj bandigi
- 8 Jun 2024 , 2:32 PM
- Athani
- 4146
ಅಥಣಿ :ಲೋಕಸಭೆ ಚುನಾವಣೆ ಬಳಿಕ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ದಿನಕ್ಕೊಂದು ಬದಲಾವಣೆ ಕಂಡು ಬರುತ್ತಿದೆ.

ಇತ್ತ ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಗೆಲುವಿನ ಬಳಿಕ ಕುಡಚಿ ಶಾಸಕ ಮಹೇಶ ತಮ್ಮಣ್ಣವರ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ವಿರುದ್ಧ ಆರೋಪ ಮಾಡಿದ ಸಚಿವ ಸತೀಶ ಜಾರಕಿಹೊಳಿ ಮಾತಿಗೆ ಅಥಣಿ ಕಾಂಗ್ರೆಸ್ ಕಾರ್ಯಕರ್ತರು ಗರಂ ಆಗಿದ್ದಾರೆ.

ಇದೆ ಮಾತು ಚುನಾವಣೆ ಪೂರ್ವದಲ್ಲಿ ಯಾಕೆ ಹೇಳಿಲ್ಲ ನಾವೆಲ್ಲರೂ ಒಂದು ಅನ್ನೋ ಭಾವನೆಯಿಂದ ಕಾಂಗ್ರೆಸ್ ಪಕ್ಷಕ್ಕಾಗಿ ಶ್ರಮಿಸಿದ್ದೇವೆ ಆದ್ರೆ ಗೆದ್ದ ಬಳಿಕ ನಮ್ಮನ್ನ ಕಡೆಗನನೆ ಮಾಡುವುದು ಎಷ್ಟು ಸರಿ ಅಥಣಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹಲಬರು ಹೊಸಬರು ಅನ್ನೋ ಭಿನ್ನಾಭಿಪ್ರಾಯಗಳಿಲ್ಲ ತಾವು ಅಥಣಿಯಲ್ಲಿ ಬಂದು ಮಾತನಾಡಿದ್ದನ್ನ ಅಥಣಿಗೆ ಬಂದು ವಾಪಾಸ್ ತೊಗೊಳ್ಳಿ ಎಂದು ಮುಖಂಡ ಶಿವು ಗುಡ್ಡಾಪುರ ಆಗ್ರಹಿಸಿದ್ದಾರೆ.
ವರದಿ : ರಾಹುಲ್ ಮಾದರ










