ಸಕಾಲಕ್ಕೆ ರೈತರಿಗೆ ಬೀಜ ಗೊಬ್ಬರ ಒದಗಿಸಿ ನೆರವಾಗುವದೇ ಸಂಸ್ಥೆಯ ಉದ್ದೇಶ. ಸುನೀಲ ಮರಕುಂಬಿ
- shivaraj B
- 5 Oct 2024 , 9:13 AM
- Bailhongal
- 227
ಬೈಲಹೊಂಗಲ : ಹಿಂಗಾರು ಬಿತ್ತನೆಗೆ ಕಡಲೆಬೀಜ ವಿತರಿಸಲಾಗುತ್ತಿದ್ದು ರೈತರು ಇದರ ಪ್ರುಓಜನ ಪಡೆಯುವಂತೆ ಆನಿಗೋಳ ಪಿಕೆಪಿಎಸ್ ಸೋಸಾಯಿಟಿ ಅಧ್ಯಕ್ಷ ಸುನೀಲ ಮರಕುಂಬಿ ಹೇಳಿದರು.
ಅವರು ತಾಲೂಕಿನ ಆನಿಗೋಳ ಗ್ರಾಮದಲ್ಲಿ ಸೊಸಾಯಿಟಿ ವತಿಯಿಂದ ರೈತರಿಗೆ ಕಡಲೆ ಬೀಜ ವಿತರಿಸಿ ಮಾತನಾಡಿ, ಸಕಾಲಕ್ಕೆ ಬೀಜ ವಿತರಣೆಗೆ ಕ್ರಮ ಕೈಕೊಳ್ಳಲಾಗಿದ್ದು, ರೈತರು ಸಂಘದ ವತಿಯಿಂದ ವಿತರಿಸುವ ಬೀಜಗಳ ಬಳಕೆ ಮಾಡಿ ಹಿಂಗಾರಿನಲ್ಲಿ ಅಧಿಕ ಇಳುವರಿ ಮಾಡಿ ನಾಡಿಗೆ ನೆರವಾಗಬೇಕಂದರು.
ಸಂಘದ ನಿರ್ದೇಶಕರಾದ ಬಸಲಿಂಗಯ್ಯ ಚಿಕ್ಕಮಠ,ಯಲ್ಲಪ್ಪ ಉಪ್ಪಾರ, ಮಾರುತಿ ಮಾದರ, ಪ್ರಗತಿಪರ ರೈತ ರಮೇಶ ಮರಕುಂಬಿ,ಸುರೇಶ ಪಾಟೀಲ,ಯಮನಪ್ಪ ಇಂಗಳಗಿ, ಕಾರ್ಯ ನಿರ್ವಾಹಕ ಈರಣ್ಣ ಆದೇನ್ನವರ,ಸಿಬ್ಬಂದಿ ಹಾಗೂ ರೈತರು ಮತ್ತು ಗ್ರಾಮಸ್ಥರು ಇದ್ದರು.
ವರದಿ : ರವಿಕಿರಣ್ ಯಾತಗೇರಿ