ಬೆಳಗಾವಿಯಿಂದ ಹೊಸ ಯುಗದ ಪ್ರಾರಂಭ ಕಾಂಗ್ರೆಸ್‌ನ ಇತಿಹಾಸ ಈ ದೇಶದ ಇತಿಹಾಸ:DK ಶಿವಕುಮಾರ್

ಬೆಳಗಾವಿ:ಡಿಸೆಂಬರ್ 26 ಮತ್ತು 27 ರಂದು ಎರಡು ದಿನಗಳ ಐತಿಹಾಸಿಕ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಸಜ್ಜಾಗಿದೆ.ಇಂದು  ಬೆಳಗಾವಿ ವಿಮಾನನಿಲ್ದಾಣದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಕಾಂಗ್ರೆಸ್‌ನ ಇತಿಹಾಸವು ಈ ದೇಶದ ಇತಿಹಾಸವಾಗಿದೆ. ಕಾಂಗ್ರೆಸ್‌ನ ಶಕ್ತಿ, ಭಾರತದ ಶಕ್ತಿ,ಎಂದು ಹೇಳಿದ್ದಾರೆ.

promotions

ಡಿಕೆ ಶಿವಕುಮಾರ್ ತಮ್ಮ ಭಾಷಣದಲ್ಲಿ ಬೆಳಗಾವಿಯ ಐತಿಹಾಸಿಕ ಮಹತ್ವವನ್ನು ಸ್ಮರಿಸಿದರು. 1924ರಲ್ಲಿ ಇಲ್ಲಿ ನೆಹರು ಮತ್ತು ದೇಶಪಾಂಡೆ ಅವರ ಬೆಂಬಲದಿಂದ ಗಾಂಧೀಜಿಯನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಇದೇ ಬೆಳಗಾವಿಯಿಂದ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಯಿತು. ಇಂದು, ಇಲ್ಲಿಂದಲೇ ಭಾರತಕ್ಕೆ ಹೊಸ ದಿಕ್ಕು ದೊರಕಲಿದೆ,” ಎಂದು ಹೇಳಿದರು.

promotions

ಡಿಸೆಂಬರ್ 27ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಗಾಂಧೀಜಿಯ ಪ್ರತಿಮೆ ಅನಾವರಣ ಕಾರ್ಯಕ್ರಮವು ವಿಶೇಷ ಆಕರ್ಷಣೆಯಾಗಲಿದೆ. ಈ ಕಾರ್ಯಕ್ರಮಕ್ಕೆ ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ನಾಯಕರಿಗೆ, ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರಿಗೆ ಆಹ್ವಾನಿಸಲಾಗಿದೆ.ಈಗ ಗಾಂಧೀಜಿಯ ನಂತರ ಖರ್ಗೆ ಅವರ ನಾಯಕತ್ವದಲ್ಲಿ ನಾವು ಮುಂದಿನ ಅಧ್ಯಾಯವನ್ನು ಬರೆಯುತ್ತೇವೆ, ಎಂದು ಡಿಕೆ ಶಿವಕುಮಾರ್ ಹೇಳಿದರು.

ಈ ಕಾರ್ಯಕ್ರಮದಲ್ಲಿ ಸುಮಾರು 600ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ. ಈ ವೇಳೆ ಗಾಂಧೀ ಬಾವಿಯ ನೀರನ್ನು ಪ್ರಾತಿನಿಧಿಕವಾಗಿ ಬಳಸಲಾಗುತ್ತದೆ, ಇದು ಪವಿತ್ರತೆಯ ಮತ್ತು ಏಕತೆಯ ಸಂಕೇತವಾಗಿದೆ. ಗಾಂಧೀ ಬಾವಿಯಿಂದ ಈ ನೀರು ದೇಶದ ಎಲ್ಲೆಡೆ ತಲುಪುವುದು ನಮ್ಮ ಧ್ಯೇಯ,ಎಂದು ಅವರು ಹೇಳಿದರು.

ಈಗ ಖರ್ಗೆ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ನವೀಕರಣದ ದಿಕ್ಕಿನಲ್ಲಿ ಹೆಜ್ಜೆಹಾಕುತ್ತಿದೆ. ಈ ಕಾರ್ಯಕ್ರಮವು ನವಯುಗದ ಪ್ರಾರಂಭ,ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಬೆಳಗಾವಿಯ ಈ ಐತಿಹಾಸಿಕ ಕಾರ್ಯಕ್ರಮವು ಸ್ವಾತಂತ್ರ್ಯ ಹೋರಾಟದ ತತ್ತ್ವಗಳನ್ನು ಸ್ಮರಿಸುತ್ತಾ, ಕಾಂಗ್ರೆಸ್ ಪಕ್ಷದ ಮುಂದಿನ ದಾರಿಯನ್ನು ರೂಪಿಸಲು ಮಹತ್ವದ ವೇದಿಕೆಯಾಗಿ ಕಾರ್ಯನಿರ್ವಹಿಸಲಿದ್ದು, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಹೊಸ ದಿಕ್ಕು ನೀಡುವ ನಿರೀಕ್ಷೆಯಲ್ಲಿದೆ.

Read More Articles