ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನಿಗಧಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಎರಡು ವರ್ಷಗಳಿಗೆ ಹೆಚ್ಚಿಸಿದ ಸರ್ಕಾರ
- 14 Jan 2024 , 11:39 PM
- Bengaluru
- 273
ಕರ್ನಾಟಕ : ಕಳೆದ ಮೂರು ವರ್ಷಗಳಿಂದ ಕೋವಿಡ್-19 ಯಿಂದಾಗಿ ನಿಯಮಿತವಾಗಿ ನೇಮಕಾತಿ ನಡೆಯದ ಪ್ರಯುಕ್ತ ಆಕಾಂಕ್ಷಿತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ವಂಚಿತವಾಗಿರುವುದರಿಂದ ವಯೋಮಿತಿಯಲ್ಲಿ 02 ವರ್ಷಗಳ ವಿನಾಯಿತಿ ನೀಡುವಂತೆ ಹಲವಾರು ಮನವಿಗಳನ್ನು ಮಾಡಿದ್ದರು.
ಅಭ್ಯರ್ಥಿಗಳ ಪರ ನಿಂತ ಸರ್ಕಾರ 2022-23 ಗೆ ಅನ್ವಯವಾಗುವಂತೆ 2ವರ್ಷಗಳ ವಯೋಮಿತಿ ವಿನಾಯತಿ ನೀಡಿದೆ.
ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗೆ ವಯೋಮಿತಿಯನ್ನು ಸಾಮಾನ್ಯ ವರ್ಗಕ್ಕೆ 25 ವರ್ಷಗಳು ಹಾಗೂ ಎಸ್.ಸಿ / ಎಸ್.ಟಿ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ 27 ವರ್ಷಗಳು ಎಂದು
ಪೊಲೀಸ್ ಕಾನ್ಸ್ಟೇಬಲ್ (ಸಿ.ಎ.ಆರ್ ಮತ್ತು ಡಿ.ಎ.ಆರ್) ಹುದ್ದೆಗಳಿಗೆ ವಯೋಮಿತಿಯನ್ನು ಸಾಮಾನ್ಯ ವರ್ಗಕ್ಕೆ 25 ವರ್ಷಗಳು ಹಾಗೂ ಎಸ್.ಸಿ / ಎಸ್.ಟಿ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ 27 ವರ್ಷಗಳು ಎಂದು ನಿಗಧಿಪಡಿಸಲಾಗಿದೆ.
ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆ ಮತ್ತು ಪೊಲೀಸ್ ಕಾನ್ಸ್ಟೇಬಲ್ (ಸಿ.ಎ.ಆರ್ ಮತ್ತು ಡಿ.ಎ.ಆರ್) ಹುದ್ದೆಗಳಿಗೆ ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳ ಸಂದರ್ಭದಲ್ಲಿ ಗರಿಷ್ಟ ವಯೋಮಿತಿಯನ್ನು 30 ವರ್ಷಗಳು ಎಂದು ಸರ್ಕಾರ ಸೂಚಿಸಿದೆ.
ಸಶಸ್ತ್ರ ಪಡೆ ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ಸಿವಿಲ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಶೇ 10 ರಷ್ಟು ಮೀಸಲಾತಿಯನ್ನು ಕಲ್ಪಿಸಿ ಗರಿಷ್ಟ ವಯೋಮಿತಿಯನ್ನು ಸಾಮಾನ್ಯ ವರ್ಗಕ್ಕೆ 31 ವರ್ಷಗಳು ಹಾಗೂ ಎಸ್ಸಿ / ಎಸ್.ಟಿ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ 33 ವರ್ಷಗಳು ಎಂದು ಸರ್ಕಾರ ನಿಗಧಿಪಡಿಸಿದೆ.
ಈ ವಯೋಮಿತಿ ಸಡಿಲಿಕೆ 2022-23ನೇ ಸಾಲಿನಲ್ಲಿ ಕರೆದಿರುವ ಪೊಲೀಸ್ ಕಾನ್ಸ್ಟೇಬಲ್ (ಸಿ.ಎ.ಆರ್ ಮತ್ತು ಡಿ.ಎ.ಆರ್) ಹುದ್ದೆಗಳಿಗೆ ಹಾಗೂ ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳಿಗೆ ಮಾತ್ರ ಅನ್ವಯವಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ದಿನಾಂಕ:31.10.2022 ರಿಂದ 30.11.2022ರವರೆಗೆ ವಿಸ್ತರಿಸಿದೆ ಹಾಗೂ ಶುಲ್ಕವನ್ನು ಅಧಿಕೃತ ಬ್ಯಾಂಕ್ ಅಥವಾ ಸ್ಥಳೀಯ ಅಂಚೆ ಕಛೇರಿಗಳ ವೇಳೆಯಲ್ಲಿ ಪಾವತಿಸಲು ಕೊನೆಯ ದಿನಾಂಕ:03.11.2022 ರಿಂದ 02.12.2022 ರವರೆಗೆ ಕಾಲಾವಕಾಶವನ್ನು ಕಲ್ಪಿಸಿ ಆದೇಶಿಸಿದೆ.
ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆ ಮತ್ತು ಪೊಲೀಸ್ ಕಾನ್ಸ್ಟೇಬಲ್ (ಸಿ.ಎ.ಆರ್. ಮತ್ತು ಡಿ.ಎ.ಆರ್)ಹುದ್ದೆಗಳಿಗೆ ನಿಗಧಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಒಂದು ಬಾರಿಗೆ ಮಾತ್ರ ಪೊಲೀಸ್ ಕಾನ್ಸ್ಟೇಬಲ್ (ಸಿ.ಎ.ಆರ್ ಮತ್ತು ಡಿ.ಎ.ಆರ್) 420+3064 (ಒಟ್ಟು 3484) ಹುದ್ದೆಗಳಿಗೆ ಹಾಗೂ ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) 1137+454 (ಒಟ್ಟು 1591) ಹುದ್ದೆಗಳಿಗೆ ಮಾತ್ರ ಗರಿಷ್ಟ ವಯೋಮಿತಿಯನ್ನು 12 ವರ್ಷಗಳಿಗೆ ಹೆಚ್ಚಿಸುವ ಹಾಗೂ ಅರ್ಜಿ ಸಲ್ಲಿಸಲು ಒಂದು ವಾರಗಳ ಕಾಲ ಅವಧಿಯನ್ನು ವಿಸ್ತರಿಸಿದೆ.