ಅಪಘಾತ ಮಾಡಿ ಲಾರಿ ಪರಾರಿ;ಸಿನಿಮಿಯ ರೀತಿಯಲ್ಲಿ ಲಾರಿ ಚೆಜಿಂಗ್!ಡ್ರೈವರ್ ಗೆ ಬಿತ್ತು ಧರ್ಮದೇಟು
- shivaraj B
- 11 Oct 2024 , 9:16 AM
- Athani
- 311
ಅಥಣಿ : ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಮಹಾರಾಷ್ಟ್ರ ಮೂಲದ MH 25 U 4047 ನಂ, ಲಾರಿ ಚಾಲಕ ಓರ್ವ ವ್ಯಕ್ತಿಯ ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಆತನನ್ನ ಹಿಡಿಯಲು ಬೆನ್ನಟ್ಟಿದ್ದ ಗ್ರಾಮಸ್ಥರಿಗೆ ಸುಮಾರು 70 ಕೀ ಮೀ ಲಾರಿ ಓಡಿಸಿ ಮುಂದೆ ಬಂದ ವಾಹನಗಳಿಗೆ ಗುದ್ದಿ ಸೀನಿಮಿಯ ರೀತಿಯಲ್ಲಿ ಲಾರಿ ಹೊಡೆದು ಲಾರಿ ಚಾಲಕ ಅಟ್ಟಹಾಸ ಮೆರೆದಿದ್ದಾನೆ.
ಹಲ್ಯಾಳ ಗ್ರಾಮದಿಂದ ಘಟನಟ್ಟಿ, ನಂದಗಾಂವ, ಸವದಿ, ಸತ್ತಿ, ರಡ್ಡೆರಟ್ಟಿ, ಗ್ರಾಮದಿಂದ ಸುಮಾರು 70 ಕೀ ಮೀ ಲಾರಿ ಓಡಿಸಿ ನಂತರ ನಾಗನೂರು ಪಿ ಕೆ ಗ್ರಾಮದದಲ್ಲಿ ನೂರಾರು ಜನ ಕೂಡಿ ಅಡ್ಡಗಟ್ಟಿ ಲಾರಿ ಹಿಡಿಯಲಾಗಿದೆ.ಲಾರಿ ಚಾಲಕನಿಗೆ ಸ್ಥಳೀಯರು ಧರ್ಮದೇಟು ನೀಡಿದ್ದಾರೆ.ಇತನ ಹುಚ್ಚಾಟಕ್ಕೆ 5 ಬೈಕ್ ಜಕಮ್ ಗೊಂಡಿದ್ದು ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಅಥಣಿ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ್ ಭೇಟಿ ನೀಡಿ ಲಾರಿ ಹಾಗೂ ಚಾಲಕನನ್ನ ವಶಕ್ಕೆ ಪಡೆದಿದ್ದಾರೆ.
ಗ್ರಾಮಸ್ಥರಿಂದ ಏಟು ತಿಂದ ಲಾರಿ ಚಾಲಕನಿಗೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ವರದಿ : ರಾಹುಲ್ ಮಾದರ