ಸಿಎಂ ರೇಸನಲ್ಲಿರುವ ಸತೀಶ ಜಾರಕಿಹೊಳಿಗೆ ಪಕ್ಷಾತೀತವಾಗಿ ಬೆಂಬಲ ನೀಡುತ್ತಿರುವ ಜಿಲ್ಲೆಯ ಶಾಸಕರು
- shivaraj B
- 11 Sep 2024 , 3:26 PM
- Belagavi
- 157
ಬೆಳಗಾವಿ: ಸಿಎಂ ರೇಸ್ ನಲ್ಲಿರುವ ಸತೀಶ ಜಾರಕಿಹೊಳಿ ಮುಖ್ಯಮಂತ್ರಿಯಾದರೆ ಸ್ವಾಗತ ಎಂದು ಖಾನಾಪುರ ಬಿಜೆಪಿ ಶಾಸಕ ವಿಠ್ಠಲ ಹಲಗೇಕರ್ ಅಚ್ಚರಿಯ ಹೇಳಿಕೆ ನೀಡಿದರು.
ಅವರು ಇಂದು ಬೆಳಗಾವಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸತೀಶ ಜಾರಕಿಹೊಳಿ ಸಿಎಂ ಆದರೇ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಲಿದೆ. ಅಲ್ಲದೆ ಅವರು ಪಕ್ಷಾತೀತವಾಗಿ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ. ಅವರು ಖಾನಾಪುರ ತಾಲೂಕನ್ನು ಹತ್ತಿರದಿಂದ ನೋಡಿದ್ದಾರೆ. ಪರಿಷತ್ ಸದಸ್ಯರಿದ್ದಾಗ ಇಡೀ ಜಿಲ್ಲೆಯನ್ನು ಓಡಾಡಿದ್ದಾರೆ. ಪಕ್ಷದಿಂದ ಅಲ್ಲ ವೈಯಕ್ತಿಕವಾಗಿ ಇದನ್ನು ನಾನು ಸ್ವಾಗತ ಮಾಡುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ 136 ಜನ ಶಾಸಕರು ಇದ್ದಾರೆ .ನಮ್ಮ ಬೆಂಬಲ ಅವರಿಗೆ ಅಗತ್ಯ ಇಲ್ಲ. ಆದರೂ ಸಹ ವೈಯಕ್ತಿಕವಾಗಿ ಮಾತ್ರ ನಮ್ಮ ಬೆಂಬಲ ನೀಡುತ್ತೇವೆ ಎಂದರು.