ಯುವ ಕಲಾವಿದ ಆನಂದ ಬಡಿಗೇರನ ಕೈಚಳಕ

ಬೈಲಹೊಂಗಲ : ನಾಡಿನ ಪ್ರಸಿದ್ದ ಕಲಾವಿದ,ಸಕಲ ಕಲೆಯನ್ನು ಕರಗತ ಮಾಡಿಕೊಂಡಿರುವ ನಮ್ಮ ಭಾಗದ ಆನಂದ ಬಡಿಗೇರ ಈತನ ಕುಂಚದಲ್ಲಿ ಕಲೆ ಅಡಗಿದೆ.

Your Image Ad

ಪ್ರತಿವರ್ಷ ಗಣಪತಿ ಹಬ್ಬ ಬಂದಾಗ  ಸತತವಾಗಿ ಮೂರು ತಿಂಗಳುಗಳ ಕಾಲ ಕುಟುಂಬದ ಸದಸ್ಯರು ಕೂಡಿ ಗಣಪತಿ ವಿಗ್ರಹ ತಯಾರಿಕೆಯಲ್ಲಿ ನಿರತರಾಗಿರುತ್ತಾರೆ.

Your Image Ad

ಪ್ರತಿವರ್ಷವೂ ವಿಶೇಷವಾದ ಮೂರ್ತಿಗಳನ್ನು ತನ್ನ ಕೈಯಿಂದ ತಯಾರಿಸುತ್ತಿರುವ ಈ ಕಲಾವಿದ ಕರ್ನಾಟಕ ರತ್ನ ಡಾ. ಪುಣಿತ ರಾಜಕುಮಾರ ಅವರ ನಿಧನದ ನಂತರ ಅದೇ ವರ್ಷದ ಗಣಪತಿ ಹಬ್ಬದಂದು ತಯಾರಿಸಿದ ಅಪ್ಪು ಅವರ ಜೊತೆಗಿನ ಗಣಪತಿ  ಬಹಳ ವಿಶೇಷವಾಗಿತ್ತಲ್ಲದೆ ಹೊರರಾಜ್ಯದಿಂದಲೂ ಬೇಡಿಕೆ ಹೆಚ್ಚಾಗಿತ್ತು ಸಮಯದ ಅಭಾವದಿಂದ ಆನಂದ ಸಾಧ್ಯವಾದಷ್ಟು ಮೂರ್ತಿಗಳನ್ನು ತಯಾರಿಸಿ ಬೇಡಿಕೆಗೆ ಸ್ಪಂದಿಸಿದ್ದ. 

Your Image Ad

ಇದಲ್ಲದೆ ಮದುವೆಯ ವಧು-ವರರ ಹೆಸರು ಬರೆಯುವದು, ಕನ್ನಡ ಚಲನಚಿತ್ರ ಹಾಗೂ ಭಾವಗೀತೆಗಳನ್ನು ಅಚ್ಚುಕಟ್ಟಾಗಿ ಹಾಡುವ ಆನಂದ ಬಡಿಗೇರ ಸಕಲ ಕಲಾ ವಲ್ಲಭನಾಗಿ ಬೈಲಹೊಂಗಲ ನಾಡಿನ ಹೆಸರನ್ನು ನಾಡಿನೆಲ್ಲಡೆ ಪಸರಿಸುವಂತೆ ಮಾಡಿದ್ದಾನೆ‌‌ 

Your Image Ad

ಈತನ ಸಾಧನೆಗೆ ಕುಟುಂಬದ ಪ್ರತಿಯೊಬ್ಬರೂ ಕೈಜೋಡಿಸುತ್ತಿದ್ದು, ಪತ್ನಿ ಕವಿತಾ ಮಕ್ಕಳಾದ ಕೃತಿರಾಜ, ವಿರಾಜ ಋಷಿಕೇಶ ಗಣಪತಿ ಮೂರ್ತಿ ತಯಾರಿಕೆಯಲ್ಲಿ ಆನಂದನಿಗೆ ಸಾಥ  ನೀಡುತ್ತಿದ್ದು, ತಂದೆ ನಾರಾಯಣ ಬಡಿಗೇರ, ತಾಯಿ ಶಾಂತಾ ಹಾಗೂ  ಸಹೋದರ ಮನೋಹರ ಅವರು ಸಹ ಆನಂದನ ಸಾಧನೆಗೆ  ಸಹಕಾರ ನೀಡುತ್ತಿದ್ದಾರೆ.

ವರದಿ : ರವಿಕಿರಣ್  ಯಾತಗೇರಿ 

Read More Articles