
ಶಾಸಕರ ಎದುರಿಗೆ ಮಾಧ್ಯಮದವರಿಗೆ ಧಮ್ಕಿ: ಬಾಯಿಬಿಡದ ಕಾಗೆ ಸಾಹೇಬರು
- krishna shinde
- 28 May 2024 , 6:20 PM
- Belagavi
- 339
ಬೆಳಗಾವಿ:ಜಿಲ್ಲೆಯ ಅಥಣಿ ತಾಲೂಕಿನ ಬೆವನೂರ ಗ್ರಾಮದ ಅಮೋಘ ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಉದ್ಭವಿಸಿದ ಈ ಘಟನೆ ಸಕಲರನ್ನು ನಡುಗಿಸಿದೆ.

ಕಾಗವಾಡ ಶಾಸಕ ರಾಜು ಕಾಗೆ ಅವರ ಸಮ್ಮುಖದಲ್ಲಿ, ಸಂತೋಷ ಚುರಮೂಲೆ ಎಂಬುವವರು ಮಾಧ್ಯಮದ ಪ್ರತಿನಿಧಿಗಳಿಗೆ ಬೆದರಿಕೆ ಹಾಕಿರುವ ವಿಡಿಯೋ ವೈರಲ್ ಆಗಿದೆ.

ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ರಾಜು ಕಾಗೆ, ಮಾಧ್ಯಮದವರು ತಮ್ಮ ಬಗ್ಗೆ ಬೇರೆ ದೃಷ್ಟಿಯಿಂದ ವರದಿ ಮಾಡಿದರೆ, ಅವರ ಮನೆ ಹೊಕ್ಕು ಕೈ ಕಾಲು ಮುರಿಯುವುದಾಗಿ ಬೆದರಿಕೆ ಹಾಕಿರುವ ಸಂತೋಷ ಚುರಮೂಲೆ, ಮಾಧ್ಯಮದ ಪ್ರತಿನಿಧಿಗಳಿಗೆ ದಮ್ಕಿ ಹಾಕಿದ್ದಾರೆ.
ಸಂವಿಧಾನದ ನಾಲ್ಕನೇಯ ಅಂಗ ಮಾಧ್ಯಮದ ಪ್ರತಿನಿಧಿಗಳಿಗೆ ಹೀಗೊಂದು ಬೆದರಿಕೆ ಸಿಕ್ಕಿರುವುದು, ಜನತೆಯಲ್ಲಿ ಆಕ್ರೋಶ ಉಂಟುಮಾಡಿದೆ.
ಶಾಸಕರಾದ ರಾಜು ಕಾಗೆ, ಈ ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.