ಭಯೋತ್ಪಾದಕ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಉಗ್ರ ಹಿಂಡಲಗಾ ಗೆ ಸ್ಥಳಾಂತರ
- shivaraj B
- 27 Aug 2024 , 8:04 AM
- Belagavi
- 350
ಬೆಳಗಾವಿ : ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕಾರಾಗೃಹದಿಂದ ಬೇದರಿಕೆ ಕರೆ ಮಾಡಿ ಕೋಟ್ಯಂತರ ರೂ. ಮೌಲ್ಯದ ಬೇಡಿಕೆ ಇಟ್ಟಿದ್ದ ಕೈದಿಯನ್ನು ಸೋಮವಾರ ರಾತ್ರಿ ನಾಗ್ಪುರ್ ದಿಂದ ವಿಮಾನದ ಮೂಲಕ ಕರೆತಂದು ಹಿಂಡಲಗಾ ಕಾರಾಗೃಹಕ್ಕೆ ರವಾನಿಸಲಾಯಿತು.
ಉಗ್ರ ಅಕ್ಬರ್ ಪಾಷಾನನ್ನು ನಾಗ್ಪುರ್ ದಿಂದಲೇ ವಿಮಾನದಲ್ಲಿ ಬೆಳಗಾವಿಗೆ ಕರೆ ತರಲಾಗಿತ್ತು. ಉಗ್ರ ಅಕ್ಬರ್ ಪಾಷಾಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಲಿಂಕ್ ಇದೆ. ಇತ್ತೀಚೆಗೆ ಬೆಳಗಾವಿ ನ್ಯಾಯಾಲಯದ ಆವರಣದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಕೈದಿ ಜಯೇಶ್ ಪೂಜಾರಿಯಿಂದ ಹಿಂಡಲಗಾ ಕಾರಾಗೃಹದಿಂದಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿಗೆ ದೂರವಾಣಿ ಕರೆ ಮಾಡಿಸಿ 200 ಕೋಟಿ ರೂ. ನೀಡಬೇಕೆಂದು ಬೇದರಿಕೆ ಹಾಕಿಸಿದ್ದ.
ಈ ಹಿನ್ನೆಲೆಯಲ್ಲಿ ಅಕ್ಬರ್ ಪಾಷಾ ಮತ್ತು ಜಯೇಶ್ ಪೂಜಾರಿಯನ್ನು ನಾಗ್ಪುರ್ ಪೊಲೀಸರು ವಶಪಡಿಸಿಕೊಂಡು ವಿಚಾರಣೆ ನಡೆಸಿದ್ದರು. ಜಯೇಶ್ ಪೂಜಾರಿಯನ್ನು ಕೆಲ ದಿನಗಳ ಹಿಂದೆಯೇ ಹಿಂಡಲಗಾಗೆ ರವಾನಿಸಿದ್ದ ನಾಗ್ಪುರ್ ಪೊಲೀಸರು. ಈಗ ಉಗ್ರ ಅಕ್ಬರ್ ಪಾಷಾನನ್ನು ನಾಗ್ಪುರ್ ಕೇಂದ್ರ ಕಾರಾಗೃಹದಿಂದ ವಿಮಾನದ ಮೂಲಕ ಬೆಳಗಾವಿಗೆ ಕರೆತಂದು ಬಿಗಿ ಪೊಲೀಸ್ ಬಂದೋಬಸ್ತನಲ್ಲಿ ಹಿಂಡಲಗಾ ಕಾರಾಗೃಹಕ್ಕೆ ರವಾನಿಸಿದ್ದಾರೆ. ಅಕ್ಬರ್ ಪಾಷಾ ಬೆಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜು ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.