ಕೋಲೆಯಾದ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆ

ಅಥಣಿ ತಾಲೂಕಿನ ಕೋಕಟನೂರ ಗ್ರಾಮದಲ್ಲಿ ಇಂದು ಸಂಜೆ ಭೀಕರ ಘಟನೆ ನಡೆದಿದ್ದು, ಇಬ್ಬರು ಯುವಕರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 

promotions

ಘಟನೆಯ ವಿವರಗಳ ಪ್ರಕಾರ, ಕೋಕಟನೂರ ಗ್ರಾಮದ ಹೊರವಲಯದಲ್ಲಿರುವ ಕೋಕಟನೂರ-ಸಾವಳಗಿ ರಸ್ತೆ ಬದಿಯಲ್ಲಿ ಇಬ್ಬರ ಶವಗಳು ಇಂದು ಸಂಜೆ 5 ಗಂಟೆಯ ಸುಮಾರಿಗೆ ಪತ್ತೆಯಾಗಿವೆ. ಕೊಲೆಯಾದ ಇಬ್ಬರೂ ಯುವಕರು ಕೋಕಟನೂರ ಗ್ರಾಮದ ನಿವಾಸಿಗಳಾಗಿದ್ದು, ಯಾಸಿನ್ ಮತ್ತು ಜಾಸ್ಮಿನ್ ಎಂದು ಗುರುತಿಸಲಾಗಿದೆ. 

promotions

ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವ ಪ್ರಕಾರ, ಈ ಯುವ ಜೋಡಿ ಪ್ರೇಮಿಗಳಾಗಿದ್ದು, ಯಾಸಿನ್‌ನ ಮಾಜಿ ಪತಿಯಿಂದಲೇ ಈ ಹತ್ಯೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. 

promotions

ಘಟನೆಯ ಬಳಿಕ ಆರೋಪಿ ಐಗಳಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. 

ಈ ಘಟನೆಯು ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ಪೊಲೀಸರು ಈ ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.

Read More Articles