ಸುಮಾರು 40 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಪ್ರೀತಿಯ ಬೀಳ್ಕೊಡುಗೆ

ಚಿಕ್ಕೋಡಿ  : ಶೈಕ್ಷಣಿಕ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಶಿಕ್ಷಕರಾದ "ಎಸ್ ಹೆಚ್ ನಡುಗಡ್ಡೆ" 40 ವರ್ಷ ವಿವಿಧ ಶಾಲೆಗಳಲ್ಲಿ ತಮ್ಮ ಶಿಕ್ಷಕ ವೃತ್ತಿ ನಿಭಾಯಿಸಿದ್ದು ಇಂದು ಮೇ 31ರಂದು ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. 

ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ, ಶಿಕ್ಷಕ ವೃಂದ,  ಪ್ರೌಢಶಾಲೆ,  ಗ್ರಾಮಸ್ಥರ ವತಿಯಿಂದ ಏರ್ಪಡಿಸಿದ ಸೇವಾ ನಿವೃತ್ತಿ ಸಮಾರಂಭ ಹಮ್ಮಿಕೊಂಡು ನಿವೃತ್ತ ಹೊಂದುತ್ತಿರುವ ಗುರುಗಳಿಗೆ ಆತ್ಮೀಯತೆಯಿಂದ ಗೌರವಿಸಿ ಸನ್ಮಾನಿಸಿಲಾಯಿತು. 

ಸುಮಾರು ವರ್ಷ ಸೇವೆ ಸಲ್ಲಿಸಿದ ಶಿಕ್ಷಕರನ್ನು ಉದ್ದೇಶಿಸಿ ವಿದ್ಯಾರ್ಥಿನಿ ತಮ್ಮ ಅನಿಸಿಕೆ ಹಂಚಿಕೊಂಡರು. 
ಶಾಲೆಯ ಸಹ ಶಿಕ್ಷಕರಾದ "ಬಿ ಎ  ಚವ್ಹಾಣ" ಮಾತನಾಡುತ್ತ  ಬಾವುಕರಾದ ಸನ್ನಿವೇಶ ಜರುಗಿತು.

ಈ ಸಂದರ್ಭದಲ್ಲಿ ಸಿ ಆರ್ ಪಿ ಗಳಾದ, ಜಿ ಏ ಕೋಷ್ಠಿ, ಪ್ರಾಥಮಿಕ ಹಾಗು ಪ್ರೌಢಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು/ಉಪಾಧ್ಯಕ್ಷರು / ಸದಸ್ಯರು ಗ್ರಾಮಸ್ಥರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Read More Articles