ಯಶಸ್ವಿಯಾಗಿ ನಡೆದ ಜಾಗೋ ಹಿಂದೂ ಸಮಾವೇಶ
- 15 Jan 2024 , 1:21 AM
- Belagavi
- 162
ಬೆಳಗಾವಿ :ಭಾರತ ಹಿಂದೂ ಧರ್ಮದ ಪ್ರತೀಕ, ಭಾರತಕ್ಕೆ ಹಿಂದೂ ಧರ್ಮ ಸಂಕೇತವಾಗಿ ಹಿಂದೂಸ್ಥಾನ ಎಂದು ಕರೆಲಾಗುತ್ತಿದೆ. ಹಿಂದೂ ಧರ್ಮದ ಪವಿತ್ರತೆ, ಹಿಂದೂ ಧರ್ಮದ ಚರಿತ್ರೆಯನ್ನು ಸಾರುವ ಉದ್ದೇಶದಿಂದ ಜಾಗೋ ಹಿಂದೂ ಸಮಾವೇಶವನ್ನು ಕಡೋಲಿ ಗ್ರಾಮದಲ್ಲಿ ಬಸವರಾಜ ಹುಂದ್ರಿ ಅವರ ನೇತೃತ್ವದಲ್ಲಿ ನಡೆಯಿತು.

ಬಿಜೆಪಿ Mla ಟಿಕೆಟ್ ಆಕಾಂಕ್ಷಿ ಬಸವರಾಜ ಹುಂದ್ರಿ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು ಪಕ್ಷಕ್ಕೆ ನಾವು ಟಿಕೆಟ್ ವಿಷಯವಾಗಿ ಮನವಿ ಮಾಡಿದ್ದೇವೆ ಪಕ್ಷ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತದೆ ಅದಕ್ಕೆ ನಾನು ಬದ್ದವಾಗಿ ನಡೆಯುತ್ತೇನೆ ಎಂದು ಹೇಳಿದರು.

ಬಳಿಕ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಪವನ್ ಕತ್ತಿ ಅವರು ಜಾಗೋ ಹಿಂದೂ ಸಮ್ಮೇಳನ ಯಾವುದೆಡ ಪಕ್ಷ, ಜಾತಿಗೆ ಸೀಮಿತವಾಗಿರದೇ ಎಲ್ಲ ಬಾಂದವರು ಸಮನ್ವಯತೆಯಲ್ಲಿ ನಡೆಯುತ್ತಿದೆ ಎಂದರು.
ಅಪ್ಪಯ್ಯ ಜಾಜರಿ, ಶ್ರೀಶೈಲ ಯಮಕನಮರಡಿ, ರವಿ ಹಂಜಿ, ಕಲಗವಾಡ ಪಾಟೀಲ, ಶಿವಾನಂದ ಪಡಗುರಿ, ಸೋಮನಾಥ ಪಾಟೀಲ್, ರವಿ ಪಾಟೀಲ



