
ರಿಂಗ್ ರೋಡ್ ನಿರ್ಮಾಣಕ್ಕೆ ನಾಗರಿಕರ ವಿರೋಧ
- 14 Jan 2024 , 11:25 PM
- Belagavi
- 101
ಬೆಳಗಾವಿ: ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈತರನ್ನು ಭೂಸ್ವಾಧೀನಪಡಿಸಿ ನಿರ್ಮಿಸಲಾಗುತ್ತಿರುವ ರಿಂಗ್‌ರೋಡ್ ಯೋಜನೆಯನ್ನು ವಿರೋಧಿಸಿ ಬೆಳಗಾವಿ ತಾಲೂಕಿನ ರೈತರು ಸೋಮವಾರ ಪ್ರತಿಭಟನೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ತಾಲೂಕಿನಲ್ಲಿ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರಿಂಗ್ ರೋಡ್ ಮಾಡಲು ಸರ್ಕಾರ ಯೋಜಿಸಿದೆ.

ಆದರೆ ಇದರಿಂದ ಫಲವತ್ತಾದ ಭೂಮಿ ಕಳೆದು ರೈತ ಬೀದಿಗೆ ಬರುತ್ತಿದ್ದಾನೆ. ಹಾಗಾಗಿ ರಿಂಗ್ ರೋಡ್‌ಗೆ ಬೆಳಗಾವಿ ತಾಲೂಕಿನ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.