ಹಿಟ್ & ರನ್ ಅಪಘಾತ : ಗಾಯಾಳುವನ್ನು ರಕ್ಷಣೆ ಮಾಡಿದ ಶಾಸಕ ಗಾಲಿ ಜನಾರ್ದನ ರೆಡ್ಡಿ

ಗಂಗಾವತಿ :- ಹಿಟ್ & ರನ್ ಅಪಘಾತಕ್ಕೆ ಒಳಗಾಗಿ ರಸ್ತೆ ಮೇಲೆ ಬಿದ್ದು ನರಳುತ್ತಿದ್ದ ಗಾಯಾಳುವನ್ನು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ರಕ್ಷಿಸಿ ಮಾನವೀಯತೆ ಮೆರೆದ ಘಟನೆ ಜರುಗಿದೆ.

promotions

ಗಂಗಾವತಿ ನಗರದ ಕಾರಟಗಿಗೆ ಹೋಗುವ ರಸ್ತೆ ಮಾರ್ಗದಲ್ಲಿ ಬೈಕ್ ಮೇಲೆ ತೆರಳುತಿದ್ದ ಸವಾರನಿಗೆ ಅಪರಚಿತ ಕಾರೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ ಸವಾರ ರಸ್ತೆ ಮೇಲೆ ಬಿದ್ದು ನರಳುತಿದ್ದ ವ್ಯಕ್ತಿಗಳನ್ನು ಗಮನಿಸಿದ ಶಾಸಕರು ತಕ್ಷಣ ತಮ್ಮ ವಾಹನದಲ್ಲಿ ಗಂಗಾವತಿ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆಯನ್ನು ಮೆರೆದರು.

promotions

Read More Articles