ಅದ್ಧೂರಿಯಾಗಿ ಜರುಗಿದ ಇಟಗಿ ಶ್ರೀ ಕಲ್ಮೇಶ್ವರ ರಥೋತ್ಸವ..

ಬೆಳಗಾವಿ: ಪ್ರತಿ ವರ್ಷದಂತೆ ಈ ವರ್ಷವೂ ಖಾನಾಪುರ ತಾಲೂಕಿನ ಇಟಗಿ ಗ್ರಾಮದ ಶ್ರೀ ಕಲ್ಮೇಶ್ವರ ಜಾತ್ರೆ ಆರಂಭವಾಗಿದೆ. ಯುಗಾದಿಯ ಹಬ್ಬಕ್ಕೆ ನಡೆಯುವ ಮೂರು ದಿನ ನಡೆಯುವ ಜಾತ್ರೆ ಅಮವಾಸ್ಯೆಯ ದಿನ ರುದ್ರಾಭಿಷೇಕ, ವಿಶೇಷ ಪೂಜೆ ಮೂಲಕ ಪ್ರಾರಂಭವಾಗಿ ನಿನ್ನೆ ಯುಗಾದಿ ಪಾಡ್ಯ ದಿನವಾಗಿದ್ದರಿಂದ ಕಲ್ಮೇಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ  ಸಾಯಂಕಾಲ ಅದ್ಧೂರಿಯಾಗಿ ರಥೋತ್ಸವ ಎಳೆಯಿತು.

ವಿವಿಧ ವಾದ್ಯ ಮೇಳದೊಂದಿಗೆ ಕಲ್ಮೇಶ್ವರ ಮೂರ್ತಿಯನ್ನು ಪಲ್ಲಕ್ಕಿ ಉತ್ಸವ ಮೂಲಕ ಅಲಂಕರಿಸಿದ ರಥದ ಮೇಲೆ ಪೂಜಿಸಿ ರಥವನ್ನು ಎಳೆಯುವ ಮೂಲಕ ಗ್ರಾಮದ ಭಕ್ತರು ಶ್ರೀ ಕಲ್ಮೇಶ್ವರ ಮಹಾರಾಜಕೀ ಜೈ ಎಂದು ಘೋಷಣೆ ಕೂಗಿ ನಾಣ್ಯ, ಉತ್ತತ್ತಿ, ಬಾಳೆಹಣ್ಣು, ಹೂವು ಎಸೆದು ಕೈಮುಗಿದು ನಮಸ್ಕರಿಸಿ ತಮ್ಮ ಭಕ್ತಿ ಅರ್ಪಿಸಿ ರಥವನ್ನು ಎಳೆದರು. ಇದೇ ವೇಳೆ ವಿಶೇಷ ಭಕ್ತರೊಬ್ಬರು ತಮ್ಮ ಪಿಯು ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕ ಗಳಿಸುವ ಹಾಗೆ ಆಶೀರ್ವಾದಿಸಬೇಕೆಂದು ಬೇಡಿಕೆಯಿಟ್ಟು ಬಾಳೆ ಹೆಣ್ಣಿನ ಮೇಲೆ ಬರೆದು ರಥಕ್ಕೆ ಸಮರ್ಪಿಸಿದ್ದು ಕಂಡುಬಂದಿದೆ.

ಇನ್ನು ರಥವೇರಿದ ಅರ್ಚಕರಾದ ಗುರುಪ್ರಸಾದ ಪೂಜಾರ, ಮೃತ್ಯುಂಜಯ ಪೂಜಾರ 'ಹರ ಹರ ಮಹಾದೇವ' ಎಂದು ಚಾಲನೆ ನೀಡಿದರು. ರಥ ಕಲ್ಮೇಶ್ವರ ದೇವಸ್ಥಾನದಿಂದ ಪತ್ರಿಬಸವಣ್ಣ ದೇವಸ್ಥಾನವರೆಗೆ ಸಾಂಗವಾಗಿ ಸಾಗಿ ದೇವಸ್ಥಾನಕ್ಕೆ ಮರಳಿತು. ಈ ವೇಳೆ ಗ್ರಾಮದ ಸಾವಿರಾರು ಭಕ್ತರು ಉಪಸ್ಥಿತರಿದ್ದರು.

Latest Articles