
ಬೆಳಗಾವಿ ರಾಜಕೀಯ ರಣರಂಗ ಕಾವೇರುತ್ತಿದ್ದು ನಾ ಮುಂದು ತಾಮುಂದು ಅಂತ ಭರವಸೆಗಳ ಸುರಿಮಳೆಯನ್ನೆ ರಾಜಕೀಯ ಪಕ್ಷಗಳು ಸುರಿಸುತ್ತಿವೆ,ಈ ಮದ್ಯೆ ರಾಜಕೀಯ ಆಟಗಳನ್ನು ವೀಕ್ಷಿಸುತ್ತಿರುವ ಸಾಮಾನ್ಯ ಪ್ರಜೆ ಇದು ಬರಿ ಎಲೆಕ್ಷನ್ ಸ್ಟಂಟ್ ಬಿಡ್ರಿ ಎಂದು ಸುಮ್ಮನಾಗುತ್ತಿದ್ದಾರೆ.
ರಾಜಕೀಯ ವ್ಯಕ್ತಿಗಳ ಈ ಆಟ ನೋಟ ಸುಧಾರಣೆವಿಲ್ಲದ ಕೆಲಸಗಳನ್ನು ಕಂಡ ಯುವ ನಾಯಕ ಪ್ರವೀಣ ಬ. ಹಿರೇಮಠ ಸನ್ಮಾನ್ಯ ಶ್ರೀ ಗಾಲಿ ಜನಾರ್ಧನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದವತಿಯಿಂದ ಬೆಳಗಾವಿ ಉತ್ತರ ಭಾಗದಲ್ಲಿ ಸ್ಪರ್ದಿಸುತ್ತಿದ್ದಾರೆ ಹಾಗು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಸುಧಾರಣೆ ತರುವ ಪನತೊಟ್ಟಿದ್ದಾರೆ.
ಯಾರಿದು ಪ್ರವೀಣ ಹಿರೇಮಠ
ಮೂಲತಃ ಸ್ಟೆನಾ ಮೆರೈನ್ ಮ್ಯಾನೇಜ್‌ಮೆಂಟ್ ಇಂಗ್ಲೆಂಡ್ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಕೆಲಸ ಮಾಡುತ್ತಿರುವ ವ್ಯಾಪಾರಿ ನೌಕಾಪಡೆಯ ಅಧಿಕಾರಿಯಾದ ಇವರು ರಾಮತೀರ್ಥನಗರದ ನಿವಾಸಿಗಳಾಗಿದ್ದಾರೆ.
ಪ್ರವೀಣರವರು ರಾಜಕೀಯಕ್ಕೆ ಸೇರುವ ಹಿಂದಿನ ಕಾರಣವೆನೆಂದರೆ ಈಗಿನ ವ್ಯವಸ್ಥೆಯಲ್ಲಿ ಬದಲಾವಣೆ ಮತ್ತು ನಮ್ಮ ಪರಿಸರವನ್ನು ಉಳಿಸಲು ಮತ್ತು ನಮ್ಮ ಬೆಳಗಾವಿಯನ್ನು ವ್ಯವಸ್ಥಿತಗೊಳಿಸಲು ಮತ್ತು ಭ್ರಷ್ಟಾಚಾರದ ವಿರುದ್ದ ಹೋರಾಡಲು ಎಂದು ಹೇಳಿದ್ದಾರೆ.
ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳು ಮತ್ತು ಸಮಾನ ಸ್ಥಾನಗಳನ್ನು ನೀಡುವುದೆ ಇವರ ಪಕ್ಷದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಇಲ್ಲಿಯವರೆಗೆ 86 ದೇಶಗಳು ವಿವಿಧ ರಾಷ್ಟ್ರೀಯತೆಗಳೊಂದಿಗೆ ಕೆಲಸ ಮಾಡಿದ ಪ್ರವೀಣ್ ಹಿರೇಮಠರವರು ಅಲ್ಲಿನ ವ್ಯವಸ್ಥೆ, ಜನ ಜೀವನ ಮತ್ತು ಅಲ್ಲಿನ ಸಂಸ್ಕೃತಿಕ ನಡೆ ನುಡಿ ಮತ್ತು ಸುಧಾರಣೆಗಳನ್ನು ಕಂಡಿದ್ದಾರೆ ಮತ್ತು ಅವರಿಂದ ಅನೇಕ ವಿಷಯಗಳನ್ನು ಕಲಿತಿದ್ದಾರೆ ಮತ್ತು ಅದಕ್ಕೆ ಅನುಗುಣವಾಗಿ ಕೆಲವು ಯೋಜನೆಗಳನ್ನು ಕೂಡಾ ಮಾಡಿದ್ದಾರೆ ಎಂದು ಲೋಕಲವಿವ ವಾಹಿನಿ ಮೂಲಕ ತಿಳಿಸಿದ್ದಾರೆ.
ಸುತ್ತಮುತ್ತಲಿನ ಆವರಣದ ಆರೋಗ್ಯವನ್ನು ಬದಲಾಯಿಸಲು ಮತ್ತು ಪರಿ ಪೂರ್ಣ ಹಸಿರನ್ನು ಬಯಸಿರುವ ಪ್ರವೀಣ ಅವರು ಅಪಾರ ದೇಶಾಭಿಮಾನಿ ಮತ್ತು ಪರಿಸರ ಪ್ರೇಮಿ ಹಾಗೂ ಯುವ ಚೈತನ್ಯ ಮತ್ತು ನಮ್ಮ್ ಸಮಾಜಕ್ಕೆ ಏನಾದರೂ ಒಳಿತು ಮಾಡಬೇಕೆಂಬ ಧ್ಯೇಯಯಿಂದ ರಾಜಕಾರಣದ ಮೂಲಕ ಜನ ಸೇವೆ ಮಾಡಲು ಬಯಸಿದ್ದಾರೆ ಎಂದು ತಿಳಿಸಿದ್ದಾರೆ.
ಈಗಾಗಲೆ ಮನೆ ಮಾತಾಗಿರುವ ಪ್ರವೀಣ್ ಅವರು ಹಲವು ಮುಖಂಡರು ಮತ್ತು ಹಿರಿಯರ ಆಶೀರ್ವಾದದೊಂದಿಗೆ ತಮ್ಮ ರಾಜಕೀಯ ಸೇವೆ ಸಲ್ಲಿಸಲು ಪ್ರಾರಂಭಿಸಿದ್ದಾರೆ ಮತ್ತು ಇವರು ಹೊಸ ಪರಿಕಲ್ಪನೆ ಮತ್ತು ಯುವ ಜನತೆಯೊಂದಿಗೆ ಬೆರೆತು ಯುವ ಜನತೆಯ ಮಾತುಗಳನ್ನು ಆಲಿಸುತ್ತಿದ್ದಾರೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ
ಕರ್ನಾಟಕದ ಮಾಜಿ ಸಚಿವ ಮತ್ತು ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರು ಡಿಸೆಂಬರ್ 25-2022ರಂದು ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿರವರ ಜನ್ಮ ದಿನದಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಪ್ರಾರಂಭಿಸಿದ್ದಾರೆ.
ಸರ್ವರಿಗೂ ಸಮ ಬಾಳು ಸರ್ವರಿಗೂ ಸಮ ಪಾಲು ಎಂಬ ಘೋಷಣೆ ಮೂಲಕ ಜನ ಮನ ಗೆಲ್ಲುತ್ತಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕರ್ನಾಟಕದಲ್ಲಿ ತನ್ನ ಛಾಪು ಮೂಡಿಸುತ್ತಿದೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಘೋಷಣೆಯ ನಂತರ ದೇಶಾದ್ಯಂತ ದೊರೆತ ಅಭೂತಪೂರ್ವ ಬೆಂಬಲಕ್ಕೆ ನಾನು ಸದಾ ಋಣಿಯಾಗಿದ್ದೇನೆ. ಕಲ್ಯಾಣ್ ರಾಜ್ಯದ ವಿವಿಧ ಕ್ಷೇತ್ರಗಳ ಪಕ್ಷದ ಟಿಕೆಟ್ ಆಕಾಂಕ್ಷಿಗಳು ತಮ್ಮ ನೂರಾರು ಅಭಿಮಾನಿಗಳೊಂದಿಗೆ ಪ್ರತಿದಿನ ಆಗಮಿಸುತ್ತಿರುವವರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಗಾಲಿ ಜನಾರ್ಧನ ರೆಡ್ಡಿ ಹೇಳಿದ್ದಾರೆ.