ವೀರಶೈವ ಲಿಂಗಾಯತ ಸಮುದಾಯದ ಒಳ ಮತ್ತು ಉಪ ಪಂಗಡಗಳಿಗೂ ಮೀಸಲಾತಿ ನೀಡಲಿ ರೇಣುಕಾಚಾರ್ಯ
- 15 Jan 2024 , 11:58 AM
- Belagavi
- 236
ಬೆಳಗಾವಿ:ಮೀಸಲಾತಿಗೆ ಪಂಚಮಸಾಲಿ ಸಮುದಾಯ ಗಡುವು ನೀಡಿರೊ ವಿಚಾರದಲ್ಲಿ ಸಿಎಂ ಬಹಳ ಚಾಣಾಕ್ಷರು ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ವೀರಶೈವ ಲಿಂಗಾಯತ ಸಮುದಾಯದಲ್ಲಿ ಒಳಪಂಗಡಗಳು ಇವೆ ಉಪ ಪಂಗಡಗಳು ಇವೆ ಅವರಿಗೂ ಕೂಡ ಮೀಸಲಾತಿ ನೀಡಲಿ ಎಂದು ಹೇಳಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ವಿಚಾರ ಮಾತನಾಡಿದ ಶಾಸಕ ರೇಣುಕಾಚಾರ್ಯ ಸಿಎಂ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಎರಡೆರಡು ಖಾತೆ ಹೊಂದಿರುವರ್ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದ್ದಾರೆ.
ಈ ಹಿಂದೆ ಕೇಂದ್ರದ ನಾಯಕರು ಮತ್ತು ಸಿಎಂ ಮುಂದೆನೂ ಹೇಳಿದ್ವಿ ಒಬ್ಬೊಬ್ರು ಎರಡು ಖಾತೆ ನಿರ್ವಹಿಸುತ್ತಿದ್ದಾರೆ ಒಂದು ವರ್ಷದಿಂದ ಖಾಲಿ ಇದೆ ,ಎರಡೆರಡು ಖಾತೆಗಳನ್ನ ಹೊಂದಿದ್ದಾರೆ
ಹೊಸ ಮುಖಗಳಿಗೆ ಅವಕಾಶ ಕೊಡಬೇಕಿತ್ತು ಎಂದು ಗುಡುಗಿದ್ದಾರೆ.
ಈಗ ವಿಳಂಬ ಆಯ್ತು!
ಬೇರೆ ಅವರಿಗೆ ಅರ್ಹತೆ ಇಲ್ವಾ..?
ಹೊಸ ಮುಖಗಳಿಲ್ವಾ..?
ಹೊಸಬರಿಗೆ ನೀಡಿದ್ರೆ ಸಂಘಟನೆ ಬಲಿಷ್ಟ ವಾಗುತ್ತೆ ಎಂದು ಹೇಳಿದ್ದಾರೆ.
ಈಶ್ವರಪ್ಪ, ಜಾರಕಿಹೊಳಿ ಅವರಿಗೆ ಕೊಡೊದಕ್ಕೆ ವಿರೋಧವಿಲ್ಲ,ವರೀಷ್ಟರನ್ನ ಭೇಟಿ ಆಗಿ ಡಿಮ್ಯಾಂಡ್ ಮಾಡಿದಿನಿ.
ನನಗೂ ಸಾಮರ್ಥ್ಯ ಇದೆ, ಅರ್ಹತೆಯಿದೆ..
ಎಕ್ಸೈಸ್ ಮಿನಿಸ್ಟರ್ ಆಗಿ ಕಾರ್ಯನಿರ್ವಹಿಸಿದ್ದಿನಿ ಎಂದು ಹೇಳಿದ್ದಾರೆ ,ನನಗೆ ಅನ್ಯಾಯ ಆಗಿದೆ, ಬೇಸರ ತರಿಸಿದೆ.
ಪದೇ ಪದೇ ಹೀಗೆ ಆಗ್ತಿದೆ. ನಾನು ಸುಮ್ಮನಿರೋದು ರೇಣುಕಾಚಾರ್ಯ ದೌರ್ಬಲ್ಯವಲ್ಲ.ನನಗೂ ಸಾಮರ್ಥ್ಯ ಇದೆ ಎಂದು ಹೇಳಿದ್ದಾರೆ.
ನನಗೂ ಸಾಮರ್ಥ್ಯ ಇದೆ, ಅರ್ಹತೆಯಿದೆ..
ಎಕ್ಸೈಸ್ ಮಿನಿಸ್ಟರ್ ಆಗಿ ಕಾರ್ಯನಿರ್ವಹಿಸಿದ್ದಿನಿ ಎಂದು ಹೇಳಿದ್ದಾರೆ ,ನನಗೆ ಅನ್ಯಾಯ ಆಗಿದೆ, ಬೇಸರ ತರಿಸಿದೆ.
ಪದೇ ಪದೇ ಹೀಗೆ ಆಗ್ತಿದೆ. ನಾನು ಸುಮ್ಮನಿರೋದು ರೇಣುಕಾಚಾರ್ಯ ದೌರ್ಬಲ್ಯವಲ್ಲ.ನನಗೂ ಸಾಮರ್ಥ್ಯ ಇದೆ ಎಂದು ಹೇಳಿದ್ದಾರೆ.



