ಇಂದಿನ ರಾಶಿ ಭವಿಷ್ಯ ಸೆಪ್ಟಂಬರ್ 21-2023 ಶ್ರೀ ವಿವೇಕಾನಂದ ಆಚಾರ್ಯ ಅವರಿಂದ.

ಮೇಷ ರಾಶಿ
ಬಂಧು ಮಿತ್ರರೊಡನೆ ಸಂವಾದಗಳು ನಡೆಯುತ್ತವೆ. ಪ್ರಯಾಣದಲ್ಲಿ ಹಠಾತ್ ಬದಲಾವಣೆಗಳು ಉಂಟಾಗುತ್ತವೆ. ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಇತರರೊಂದಿಗೆ ವಿವಾದಗಳಿಂದ ದೂರವಿರುವುದು ಉತ್ತಮ. ದೇಗುಲಕ್ಕೆ ಭೇಟಿ ನೀಡುತ್ತೀರಿ. ವ್ಯಾಪಾರದಲ್ಲಿ ಒತ್ತಡ ಹೆಚ್ಚಾಗುತ್ತದೆ. ಉದ್ಯೋಗಿಗಳಿಗೆ ಸ್ಥಾನಚಲನೆಗಳಾಗುತ್ತವೆ.

ಅದೃಷ್ಟದ ದಿಕ್ಕು:ಆಗ್ನೇಯ
ಅದೃಷ್ಟದ ಸಂಖ್ಯೆ:6
ಅದೃಷ್ಟದ ಬಣ್ಣ:ಹಸಿರು

ವೃಷಭ ರಾಶಿ
ಸಂಗಾತಿಯೊಂದಿಗೆ ಶುಭ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಬಾಲ್ಯದ ಸ್ನೇಹಿತರೊಂದಿಗೆ ಸೌಹಾರ್ದತೆಯಿಂದ ವರ್ತಿಸುತ್ತೀರಿ. ಸ್ಥಿರಾಸ್ತಿ ವ್ಯವಹಾರಗಳಲ್ಲಿ ಹೊಸ ಒಪ್ಪಂದಗಳು ಕೂಡಿ ಬರುತ್ತವೆ. ಹೊಸ ವ್ಯಾಪಾರಗಳನ್ನು ಆರಂಭಿಸಿ ಲಾಭ ಪಡೆಯುತ್ತೀರಿ. ಉದ್ಯೋಗಿಗಳಿಗೆ ಪ್ರೋತ್ಸಾಹಗಳು ದೊರೆಯುತ್ತವೆ.

ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:4
ಅದೃಷ್ಟದ ಬಣ್ಣ:ಬೂದು

ಮಿಥುನ ರಾಶಿ
ಪ್ರಮುಖ ಸಮಯದಲ್ಲಿ ಆಪ್ತ ಸ್ನೇಹಿತರ ಸಹಾಯ ಸಿಗುತ್ತದೆ ಮತ್ತು ಆಸ್ತಿ ವಿವಾದಗಳು ಬಗೆಹರಿಯುತ್ತವೆ. ವಾಹನ ವ್ಯಾಪಾರಿಗಳಿಗೆ ಲಾಭ ದೊರೆಯುತ್ತದೆ ಮತ್ತು ಕೌಟುಂಬಿಕ ವಾತಾವರಣ ಸಂತಸದಿಂದ ಕೂಡಿರುತ್ತದೆ. ಉದ್ಯೋಗಿಗಳ ಸ್ಥಾನಮಾನ ಹೆಚ್ಚಾಗುತ್ತದೆ. ಹಠಾತ್ ಆರ್ಥಿಕ ಲಾಭ ಉಂಟಾಗುತ್ತದೆ.

ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:7
ಅದೃಷ್ಟದ ಬಣ್ಣ:ಹಳದಿ

ಕಟಕ ರಾಶಿ
ಕುಟುಂಬ ಸದಸ್ಯರ ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ವೃತ್ತಿಪರ ವ್ಯವಹಾರಗಳು ಉತ್ಸಾಹದಿಂದ ಕೂಡಿರುತ್ತವೆ. ಕೈಗೊಂಡ ವ್ಯವಹಾರಗಳು ಪ್ರಗತಿಯಾಗದೇ ನಿರಾಶೆ ಉಂಟಾಗುತ್ತದೆ. ಪ್ರಯಾಣವನ್ನು ಮುಂದೂಡುವುದು ಉತ್ತಮ. ಮನೆಯ ಹೊರಗೆ ಜಾಗ್ರತೆಯಿಂದ ಇರಬೇಕು. ಉದ್ಯೋಗಗಳು ಸಾಮಾನ್ಯವಾಗಿ ಸಾಗುತ್ತವೆ.

ಅದೃಷ್ಟದ ದಿಕ್ಕು:ನೈಋತ್ಯ
ಅದೃಷ್ಟದ ಸಂಖ್ಯೆ:3
ಅದೃಷ್ಟದ ಬಣ್ಣ:ಕಿತ್ತಳೆ

ಸಿಂಹ ರಾಶಿ
ಹೊಸ ಸಾಲಗಳನ್ನು ಮಾಡಲಾಗುತ್ತದೆ. ದೂರ ಪ್ರಯಾಣದ ಸೂಚನೆಗಳಿವೆ. ಬಂಧುಗಳೊಂದಿಗೆ ವಿವಾದಗಳು ಉಂಟಾಗುತ್ತವೆ. ಆರೋಗ್ಯದ ವಿಷಯದಲ್ಲಿ ಅಜಾಗರೂಕತೆ ಒಳ್ಳೆಯದಲ್ಲ. ವೃತ್ತಿ ಪರ ವ್ಯಾಪಾರಗಳಲ್ಲಿ ಗೊಂದಲಮಯ ಪರಿಸ್ಥಿತಿಗಳಿರುತ್ತವೆ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಂದ ವಿಶ್ರಾಂತಿ ಇರುವುದಿಲ್ಲ.

ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:9
ಅದೃಷ್ಟದ ಬಣ್ಣ:ಹಳದಿ

ಕನ್ಯಾ ರಾಶಿ
ಉದ್ಯೋಗ ಪ್ರಯತ್ನಗಳು ಸಫಲವಾಗುತ್ತವೆ, ಹೊಸ ಪರಿಚಯಗಳು ಹೆಚ್ಚಾಗುತ್ತವೆ. ಕೈಗೊಂಡ ಕಾರ್ಯಗಳು ನಿರಾಯಾಸವಾಗಿ ಪೂರ್ಣಗೊಳ್ಳತ್ತವೆ, ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ, ಮಿತ್ರರಿಂದ ಆರ್ಥಿಕ ಲಾಭ ಉಂಟಾಗುತ್ತದೆ, ವೃತ್ತಿ ವ್ಯವಹಾರಗಳಲ್ಲಿ ಲಾಭ ದೊರೆಯುತ್ತದೆ.

ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:8
ಅದೃಷ್ಟದ ಬಣ್ಣ:ನೀಲಿ

ತುಲಾ ರಾಶಿ
ಬಂಧುಗಳಿಂದ ಒತ್ತಡ ಹೆಚ್ಚಾಗುತ್ತದೆ. ಕೆಲವು ಕೆಲಸಗಳು ಕುಟುಂಬದ ಮುಖ್ಯಸ್ಥರ ನೆರವಿನಿಂದ ಪೂರ್ಣಗೊಳ್ಳುತ್ತವೆ. ದೂರ ಪ್ರಯಾಣಗಳಿಂದ ದೈಹಿಕ ಶ್ರಮ ಉಂಟಾಗುತ್ತದೆ. ವ್ಯಾಪಾರಗಳಲ್ಲಿ ಲಾಭವನ್ನು ಪಡೆಯಲು ಕಷ್ಟಕರವಾಗಿರುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಹೆಚ್ಚಿನ ಪ್ರಯತ್ನಗಳಿಂದ, ಕಡಿಮೆ ಫಲಿತಾಂಶಗಳು ದೊರೆಯುತ್ತವೆ.

ಅದೃಷ್ಟದ ದಿಕ್ಕು:ಆಗ್ನೇಯ
ಅದೃಷ್ಟದ ಸಂಖ್ಯೆ:6
ಅದೃಷ್ಟದ ಬಣ್ಣ:ಬಿಳಿ

ವೃಶ್ಚಿಕ ರಾಶ
ಮನೆಯ ಹೊರಗೆ ಜನಪ್ರಿಯತೆ ಹೆಚ್ಚಾಗುತ್ತದೆ, ಎಲ್ಲಾ ಕ್ಷೇತ್ರಗಳಿಗೂ ಆದಾಯ ಉತ್ತಮವಾಗಿರುತ್ತದೆ, ಹೊಸ ವಾಹನ ಖರೀದಿ ನಡೆಯಲಿದೆ. ಭೂಮಿಗೆ ಸಂಬಂಧಿಸಿದ ಖರೀದಿಗಳಲ್ಲಿ ನಿರೀಕ್ಷಿತ ಲಾಭವನ್ನು ಪಡೆಯಲಾಗುತ್ತದೆ. ವ್ಯಾಪಾರಗಳು ಹೂಡಿಕೆಗಳನ್ನು ಸ್ವೀಕರಿಸುತ್ತವೆ. ಉದ್ಯೋಗಗಳಲ್ಲಿ ಬಡ್ತಿಗಳು ಹೆಚ್ಚಾಗುತ್ತವೆ. 

ಅದೃಷ್ಟದ ದಿಕ್ಕು:ವಾಯುವ್ಯ
ಅದೃಷ್ಟದ ಸಂಖ್ಯೆ:8
ಅದೃಷ್ಟದ ಬಣ್ಣ:ನೀಲಿ

ಧನಸ್ಸು ರಾಶಿ
ಸಹೋದರರೊಂದಿಗಿನ ವಿವಾದಗಳು ಹೆಚ್ಚಾಗುತ್ತವೆ. ವ್ಯಾಪಾರದಲ್ಲಿ ನಿರಾಶೆ ಉಂಟಾಗುತ್ತದೆ. ಉದ್ಯೋಗಿಗಳ ಬಗ್ಗೆ ಅಧಿಕಾರಿಗಳಿಂದ ಅನಿರೀಕ್ಷಿತ ಮಾತುಗಳನ್ನು ಕೇಳ ಬೇಕಾಗುತ್ತದೆ. ಪ್ರಯಾಣದಲ್ಲಿ ಅಡಚಣೆಗಳು ಉಂಟಾಗುತ್ತವೆ. ಆಧ್ಯಾತ್ಮಿಕ ಚಿಂತೆಗಳು ಹೆಚ್ಚಾಗುತ್ತವೆ. ಹಣಕಾಸಿನ ವ್ಯವಹಾರಗಳು ನಿರಾಶಾದಾಯಕವಾಗಿರುತ್ತವೆ.

ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:5
ಅದೃಷ್ಟದ ಬಣ್ಣ:ಕೆಂಪ

ಮಕರ ರಾಶಿ
ಕೈಗೆತ್ತಿಕೊಂಡ ಕೆಲಸದಲ್ಲಿ ಅಪ್ರಯತ್ನ ಕಾರ್ಯ ಸಿದ್ಧಿ ದೊರೆಯುತ್ತದೆ. ಬೆಲೆ ಬಾಳುವ ವಸ್ತು ಮತ್ತು ವಾಹನಗಳನ್ನು ಖರೀದಿಸುತ್ತೀರಿ. ವ್ಯಾಪಾರಗಳಲ್ಲಿ ಹೊಸ ಲಾಭವನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ಅನುಕೂಲಕರ ಬದಲಾವಣೆಗಳಾಗುತ್ತವೆ. ದೈವ ದರ್ಶನವನ್ನು ಪಡೆಯುತ್ತೀರಿ.

ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:6
ಅದೃಷ್ಟದ ಬಣ್ಣ:ಹಸಿರು

ಕುಂಭ ರಾಶಿ
ಹಠಾತ್ ಆರ್ಥಿಕ ಲಾಭ ದೊರೆಯುತ್ತದೆ, ಪ್ರಮುಖ ವಿಷಯಗಳಲ್ಲಿ ನಿಮ್ಮ ನಿರೀಕ್ಷೆಗಳು ನಿಜವಾಗುತ್ತವೆ, ನಿಮ್ಮ ಆಪ್ತ ಸ್ನೇಹಿತರಿಂದ ಶುಭ ಕಾರ್ಯಕ್ಕೆ ಆಮಂತ್ರಣಗಳನ್ನು ಸ್ವೀಕರಿಸುತ್ತೀರಿ, ಭೂಮಿಗೆ ಸಂಬಂಧಿಸಿದ ವಿವಾದಗಳಿಂದ ಮುಕ್ತರಾಗುತ್ತೀರಿ, ವೃತ್ತಿಪರ ವ್ಯವಹಾರವು ಅಭಿವೃದ್ಧಿ ಹೊಂದುತ್ತದೆ, ಉದ್ಯೋಗಿಗಳಿಗೆ ತಕ್ಕ ಮನ್ನಣೆ ಸಿಗುತ್ತದೆ. 

ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:7
ಅದೃಷ್ಟದ ಬಣ್ಣ:ನೀಲಿ

ಮೀನ ರಾಶಿ
ಪ್ರಯಾಣಗಳು ಹಠಾತ್ತಾಗಿ ಮುಂದೂಡಲ್ಪಡುತ್ತವೆ, ವ್ಯರ್ಥ ಖರ್ಚುಗಳು ಉಂಟಾಗುತ್ತವೆ, ಪ್ರಮುಖ ವ್ಯವಹಾರಗಳು ನಿಧಾನವಾಗಿ ಪೂರ್ಣಗೊಳ್ಳುತ್ತವೆ, ನೀವು ಮಾಡದ ಕೆಲಸಕ್ಕಾಗಿ ಸ್ನೇಹಿತರಿಂದ ಟೀಕೆಗಳನ್ನು ಎದುರಿಸುತ್ತೀರಿ, ಹೊಸ ವ್ಯಾಪಾರಗಳು ನಿಧಾನವಾಗುತ್ತವೆ, ವೃತ್ತಿಪರ ಉದ್ಯೋಗಗಳಲ್ಲಿ ಕಿರಿಕಿರಿಗಳು ಹೆಚ್ಚಾಗುತ್ತವೆ.

ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:9 
ಅದೃಷ್ಟದ ಬಣ್ಣ:ಕೆಂಪು

Latest Articles